"ಧ್ಯಾನವನ್ನು ಆಕ್ರಮಣಕಾರಿ ವರ್ತನೆಯನ್ನು ಕಡಿಮೆ ಮಾಡಲು ಉಪಯೋಗಿಸಬಹುದು" ಎಂಬ ವಿಷಯದ ಮೇಲೆ ನಾನು ಮಾಡಿದ ಉಪನ್ಯಾಸದ ಬಗ್ಗೆ, ಪ್ರತಿಕ್ರಯಿಸುತ್ತಾ ಒಬ್ಬ ಶಾಲಾ ಶಿಕ್ಷಕಿ ನನಗೆ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.
ಮೊದಲನೆಯದಾಗಿ, ಮಕ್ಕಳನ್ನು ಧ್ಯಾನಾಭ್ಯಾಸಗಳಿಗೆ ಯಾವ ವಯಸ್ಸಿನಲ್ಲಿ ಪರಿಚಯಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಅವರು ಬಯಸಿದ್ದಾರೆ.
ಎರಡನೆಯದಾಗಿ, ಗದ್ದಲಮಯ ತರಗತಿಯನ್ನು ಶಾಂತಗೊಳಿಸಲು ಮಕ್ಕಳಿಂದ "ಓಂ" ಜಪ ಮಾಡಿಸುವ ತಮ್ಮ ವಿಧಾನವನ್ನು ನಾನು ಸಮರ್ಥಿಸುತ್ತೇನೆಯೇ ಎಂದೂ ಕೇಳಿದ್ದಾರೆ. ಅವರ ಸ್ವಂತ ಅನುಭವದ ಪ್ರಕಾರ, ಹಾಗೆಮಾಡುವುದು ಮಕ್ಕಳನ್ನು ಸ್ಚಲ್ಪ ಹೊತ್ತಿನಮಟ್ಟಿಗಾದರೂ ಶಾಂತಗೊಳಿಸುತ್ತದೆ.
ಈ ಎರಡೂ ಪ್ರಶ್ನೆಗಳು ತುಂಬಾ ಆಸಕ್ತಿದಾಯಕವಾಗಿವೆ, ಮತ್ತು ಸ್ವಲ್ಪ ವಿವರವಾದ ಉತ್ತರವನ್ನು ಅಪೇಕ್ಷಿಸುತ್ತವೆ. ಅದನ್ನೇ ಈ ಭಾಗದಲ್ಲಿ ನಾವು ನೋಡೋಣ.

ಮೊದಲನೆಯದಾಗಿ, — ಮಗುವಿಗೆ ಯಾವ ವಯಸ್ಸಿನಲ್ಲಿ ಧ್ಯಾನ ಮಾಡುವುದನ್ನು ಕಲಿಸಬೇಕು?
ಇಂದಿನ ಹಲವಾರು ಪೋಷಕರು ಮಾಡುವಂತೆ ಇಂಟರ್ನೆಟ್ ಮತ್ತು ಮೊಬೈಲ್ ಗದ್ದಲಕ್ಕೆ ಹೆಚ್ಚು ಒಡ್ಡದೆ ಇದ್ದರೆ, ಮಗುವಿನ ಮೆದುಳು ಯಾವುದೇ ಧ್ಯಾನಾಭ್ಯಾಸವನ್ನು ಸ್ವೀಕರಿಸಲು ಅತ್ಯಂತ ಸೂಕ್ತ ಸ್ಥಿತಿಯಲ್ಲಿರುತ್ತದೆ. ಆ ಪುಟ್ಟ ಮೆದುಳು ಮೆದುವಾದ ಮಣ್ಣಿನಂತೆ. ಬಹಳ ಸುಲಭವಾಗಿ ರೂಪುಗೊಳ್ಳುವಂಥದ್ದು. ನಮ್ಮಂತೆ ಅದನ್ನು ವಿಚಲಿತಗೊಳಿಸುವ ಬಾಹ್ಯ ಪ್ರಚೋದನೆಗಳು ಅತ್ಯಲ್ಪ. ಅದಕ್ಕಾಗಿಯೇ ಇದೇ ಧ್ಯಾನವನ್ನು ಆರಂಭಿಸಲು ಸರಿಯಾದ ಕಾಲ.
ಆದರೆ, ಎರಡನೇ ಪ್ರಶ್ನೆಯಲ್ಲಿ ಕಾಣಿಸುವ ರೀತಿಯಲ್ಲಿ ಧ್ಯಾನವನ್ನು ತಾತ್ಕಾಲಿಕ ಸಮಸ್ಯೆಯ ನಿವಾರಣೆಯ ಉಪಾಯವಾಗಿ ನೋಡಬೇಡಿ. ಸರಿಯಾದ ಧ್ಯಾನಾಭ್ಯಾಸವನ್ನು ಮೊದಲೇ ಬೆಳೆಸಿಕೊಂಡಿದ್ದರೆ, ಅಂತಹ ಸಂದರ್ಭಗಳೇ ಪ್ರಾಯಶಃ ಕಡಿಮೆಯಾಗುತ್ತಿದ್ದವು,
ಹಾಗಾದರೆ, ಧ್ಯಾನವನ್ನು ಕಲಿಸಲು ಸರಿಯಾದ ವಯಸ್ಸು ಯಾವುದು?
ನಿಮ್ಮ ಹೆಸರನ್ನು ನೋಡಿದರೆ ನೀವು ಭಾರತೀಯರು ಎಂದು ತೋರುತ್ತದೆ. ಅದು ನಿಜವಾಗಿದ್ದರೆ, ಈ ವಿಷಯದಲ್ಲಿ ಸಾಕಷ್ಟು ಅಧ್ಯಯನ ಮಾಡಿದ ನಿಮ್ಮ ಪೂರ್ವಜರ ಬಗ್ಗೆ ನೀವು ಹೆಮ್ಮೆಪಡಬೇಕು.
ಪ್ರಾಚೀನ ಭಾರತದಲ್ಲಿ, ಮಕ್ಕಳು ಶಾಲೆಗೆ ಸೇರುವಾಗ ಅವರಿಗೆ 'ಗಾಯತ್ರಿ' ಎಂಬ ಮಂತ್ರದ ಉಪದೇಶವನ್ನು ಮಾಡಲಾಗುತ್ತಿತ್ತು. ಈ ಪರಂಪರೆ ಸಾವಿರಾರು ವರ್ಷ ಹಳೆಯದು. ವೇದಗಳಲ್ಲೇ ಇದರ ಉಲ್ಲೇಖವಿದೆ. ಇದು ಒಂದು ಚಿಕ್ಕ ಮಂತ್ರವಾಗಿದ್ದು, ಅದನ್ನು ನಿರ್ದಿಷ್ಟ ವಿಧಾನದಲ್ಲಿ, ದಿನಕ್ಕೆ ಎರಡು ಬಾರಿ, ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು. ಇದರ ಉದ್ದೇಶ — ಮೆದುಳಿನ ಗ್ರಹಣಶಕ್ತಿಯನ್ನು ಉತ್ತೇಜಿಸುವುದು.
ಇದರಿಂದ ಮಕ್ಕಳಿಗೆ ಓದಿನಲ್ಲಿ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ ಎಂಬುದು ಹೇಳಬೇಕಾಗಿಲ್ಲ. ನಂತರದ ಜೀವನದಲ್ಲಿಯೂ ತೀಕ್ಷ್ಣ ಮನಸ್ಸು ಅವರಿಗೆ ಬಹಳ ಉಪಕಾರಿಯಾಗುತ್ತದೆ.
ಹಾಗಾಗಿ, ಈ ಮಂತ್ರವನ್ನು ಜೀವನಪೂರ್ತಿ ಜಪಿಸುವಂತೆ ಸೂಚಿಸಲಾಗಿದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇತರ ಮಂತ್ರಗಳನ್ನು ಜಪಿಸಲು ಅನುಮತಿ ಇಲ್ಲದ ದಿನಗಳಲ್ಲಿಯೂ ಇದನ್ನು ಮಾತ್ರ ತಪ್ಪದೇ ಜಪಿಸಬೇಕು.
ಯಾವುದೇ ಮಂತ್ರವನ್ನು ನಿಯಮಿತವಾಗಿ ಜಪಿಸುವುದು ಒಂದು ರೀತಿಯ ಧ್ಯಾನವೇ ಆಗುತ್ತದೆ. ಇದರ ಮುಖ್ಯ ಉದ್ದೇಶ ಗ್ರಹಣಶಕ್ತಿಯನ್ನು ತೀಕ್ಷ್ಣಗೊಳಿಸುವುದಾದರೂ, ಇದು ಮನಸ್ಸನ್ನು ಶಾಂತಗೊಳಿಸಿ, ಚಿಂತನೆಗೆ ಸ್ಪಷ್ಟತೆಯನ್ನು ನೀಡುತ್ತದೆ.
ಸಾವಿರಾರು ವರ್ಷಗಳಿಂದ ನಿರಂತರವಾಗಿ ಈ ಪದ್ಧತಿ ನಡೆಯುತ್ತಾ ಬಂದಿದ್ದರೂ ಹಲವಾರು ತಪ್ಪು ಕಲ್ಪನೆಗಳಿಂದಾಗಿ ಈ ಪ್ರಾಚೀನ ಧ್ಯಾನ ಪದ್ಧತಿಯು ಮೂಲೆಗುಂಪಾಗುತ್ತಿದೆ. ಸ್ಪಷ್ಟತೆಗಾಗಿ ಕೆಲವೊಂದು ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳೋಣ.
ಪ್ರಶ್ನೆ 1: ಈ ಅಭ್ಯಾಸವನ್ನು ಯಾವ ವಯಸ್ಸಿನಲ್ಲಿ ಆರಂಭಿಸಬೇಕು?
ಪಾರಂಪರಿಕವಾಗಿ, ಮಕ್ಕಳನ್ನು ಶಾಲೆಗೆ ಸೇರಿಸುವ ವಯಸ್ಸನ್ನು 'ಗರ್ಭಾಷ್ಟಮ' ಎಂದು ಹೇಳುತ್ತಾರೆ — ಅಂದರೆ ತಾಯಿಯ ಗರ್ಭದಲ್ಲಿದ್ದ ಅವಧಿಯನ್ನು ಸೇರಿಸಿ 8 ವರ್ಷ. ಅಂದಾಜಿಗೆ, ಹುಟ್ಟಿನಿಂದ 7 ವರ್ಷ ಎಂದು ತೆಗೆದುಕೊಳ್ಳಬಹುದು.
ಆದರೆ, ಮಗುವನ್ನು ಮಹಾ ಪಂಡಿತನಾಗಿ ರೂಪಿಸಲು ನೀವು ಬಯಸಿದರೆ, 5 ವರ್ಷದಲ್ಲೇ ಶಾಲೆಗೆ ಸೇರಿಸಬಹುದು. ಅದೇ ವಯಸ್ಸಿನಿಂದ ಧ್ಯಾನಾಭ್ಯಾಸವನ್ನು ಆರಂಭಿಸಬಹುದು.
ಪ್ರಶ್ನೆ 2: ಈ ಧ್ಯಾನವು ಕೆಲವು ಜಾತಿಗಳಿಗೆ ಮಾತ್ರವೇ ಸೀಮಿತವೇ?
ಇಂದಿನ ಕಾಲದಲ್ಲಿ ಇದು ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಣುತ್ತದೆ. ಆದರೆ ಪಾರಂಪರಿಕವಾಗಿ ಬ್ರಾಹ್ಮಣರಷ್ಟೇ ಅಲ್ಲದೆ ಇತರ ವರ್ಣಗಳವರಿಗೂ ಶಿಕ್ಷಣ ಕಡ್ಡಾಯವಾಗಿತ್ತು. ಸಹಜವಾಗಿ, ಎಲ್ಲರೂ ಈ ಧ್ಯಾನಾಭ್ಯಾಸಕ್ಕೆ ಅರ್ಹರಾಗಿದ್ದರು.
ಪ್ರಶ್ನೆ 3: ಇದು ಯಾವುದೇ ಲಿಂಗಪರವಾಗಿದೆಯೇ?
ಇಂದಿನ ಕಾಲದಲ್ಲಿ ಇದು ಹುಡುಗರಿಗೆ ಮಾತ್ರ ಸೀಮಿತವಾಗಿದೆ. ಆದರೆ ಮೊದಲು ಹಾಗಿರಲಿಲ್ಲ. ಇದು ನಂತರದ ಕಾಲದ ಒಂದು ವೈಪರೀತ್ಯ. ಪ್ರಾಚೀನ ಭಾರತದಲ್ಲಿ ಹುಡುಗರು ಹೇಗೋ ಹಾಗೆಯೇ ಹುಡುಗಿಯರೂ ಶಾಲೆಗೆ ಹೋಗಲು ಅರ್ಹರಾಗಿದ್ದರು. ಆದ್ದರಿಂದ, ಇಬ್ಬರೂ ಈ ಧ್ಯಾನಾಭ್ಯಾಸವನ್ನು ಮಾಡಬೇಕೆಂದು ನಿರೀಕ್ಷಿಸಲಾಗುತ್ತಿತ್ತು.
ನಂತರ ಕ್ರಮೇಣ, ಸಮಾಜದಲ್ಲಿ ಸಂಭವಿಸಿದ ಬದಲಾವಣೆಗಳಿಂದಾಗಿ ಈ ಪದ್ಧತಿ ಮಾರ್ಪಾಡಾಯಿತು. ಮೂಲ ಶಾಸ್ತ್ರಗಳು ಹುಡುಗಿಯರಿಗೆ ಶಿಕ್ಷಣವನ್ನು ನಿಷೇಧಿಸುವುದಿಲ್ಲ. ಕೆಲವು ಕಡೆ 'ಹುಡುಗಿಯರಿಗೆ ಶಿಕ್ಷಣದ ಅಗತ್ಯವಿಲ್ಲ, ಏಕೆಂದರೆ ಅವರ ಮುಖ್ಯ ಪಾತ್ರ ಕುಟುಂಬದ ನಿರ್ವಹಣೆ' ಎಂದು ಹೇಳಲಾಗಿದೆ. ಅದು ಕಟ್ಟುನಿಟ್ಟಿನ ನಿಯಮವಲ್ಲ. ಒಂದು ರೀತಿಯಲ್ಲಿ ಇದು ಪಾತ್ರಗಳ ಹಂಚಿಕೆ ಮಾತ್ರ. ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಕಡ್ಡಾಯವಾಗಿ ಅನುಸರಿಸುವ ಅಗತ್ಯವಿಲ್ಲ.
ಪ್ರಶ್ನೆ 4: ಗಾಯತ್ರಿ ಮಂತ್ರದ ಜಪವು ಮಹಿಳೆಯರ ಪ್ರಜನನ ವ್ಯವಸ್ಥೆಗೆ ಹಾನಿ ಮಾಡುತ್ತದೆಯೇ?
ಇದಕ್ಕಿಂತ ದೊಡ್ಡ ಹಾಸ್ಯವೇ ಇಲ್ಲ! ಯಾರಾದರೂ ಹೀಗೆ ಹೇಳಿದರೆ, ಅವರಿಗೆ ಸಾಕ್ಷಿ ಕೇಳಿ. ಆ ಸಾಕ್ಷಿ ಶಾಸ್ತ್ರಾಧಾರವಾಗಿರಬಹುದು, ತಾರ್ಕಿಕವಾಗಿರಬಹುದು, ಅಥವಾ ಪ್ರಾಯೋಗಿಕವಾಗಿರಬಹುದು.
ಆದರೆ ಅವರು ಇದ್ಯಾವುದನ್ನೂ ತೋರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದೊಂದು ಆಧಾರ ರಹಿತ ತಪ್ಪು ಕಲ್ಪನೆ.
ಪ್ರಶ್ನೆ 5: ಹಿಂದೂಗಳಲ್ಲದವರು ಗಾಯತ್ರಿ ಮಂತ್ರವನ್ನು ಜಪಿಸಬಹುದೇ? ಹಾಗೆ ಮಾಡಿದರೆ ಅದು ಅವರ ಧರ್ಮಕ್ಕೆ ವಿರುದ್ಧವಾಗಬಲ್ಲುದೇ?
ಈ ಮಂತ್ರದ ಅರ್ಥವನ್ನು ಯಾರು ಮನದಟ್ಟು ಮಾಡಿಕೊಂಡಿದ್ದಾರೋ, ಅವರಿಗೆ ಇದು ಯಾವುದೇ ಧರ್ಮದ ದೇವರಿಗೆ ಅನ್ವಯಿಸಬಹುದು ಎಂಬುದು ಸ್ಪಷ್ಟವಾಗುತ್ತದೆ. ಈ ಮಂತ್ರದಲ್ಲಿ ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಾದ ಅಂಶವಿಲ್ಲ.
ಈ ವಿಷಯಗಳ ಬಗ್ಗೆ ನಾನು ನನ್ನ "A Mantra to enhance your mental capabilities" ಪುಸ್ತಕದಲ್ಲಿ ಇನ್ನಷ್ಟು ವಿವರವಾಗಿ ಚರ್ಚಿಸಿದ್ದೇನೆ.
ಹೀಗಾಗಿ, ಎಲ್ಲ ಮಕ್ಕಳಿಗೂ ಈ ಮಂತ್ರವನ್ನು ಜಪಿಸಲು ಕಲಿಸಬಹುದು. ಆದರೆ ಪರಿಣಾಮಕಾರಿಯಾಗಬೇಕಾದರೆ, ಅದನ್ನು ನಿಯಮಿತವಾಗಿ, ತಪ್ಪದೇ, ಒಂದು ನಿರ್ದಿಷ್ಟ ಅವಧಿಯವರೆಗೆ ಜಪಿಸಬೇಕು.
ಈ ಮಂತ್ರ ಹೇಗೆ ಕೆಲಸಮಾಡುತ್ತದೆ ?
ಈ ಮಂತ್ರದ ಧ್ವನಿವಿನ್ಯಾಸವು ಜಪಿಸುವ ವ್ಯಕ್ತಿಯ ಮೆದುಳಿನಲ್ಲಿರುವ ಗಮನ ವ್ಯವಸ್ಥೆಯನ್ನು ಸಮತೋಲನಗೊಳಿಸಿ ಏಕಾಗ್ರತೆಯನ್ನು ನೀಡುತ್ತದೆ. ಆದರೆ ಅದು ಅಗತ್ಯವಾದ ಮಟ್ಟಿನ ಏಕಾಗ್ರತೆಯನ್ನು ಮಾತ್ರ ನೀಡುತ್ತದೆ — ಅತಿಯಾಗಿ ಅಲ್ಲ.
ಈ ಏಕಾಗ್ರತೆಯೇ ವಿವಿಧ ವಿಷಯಗಳನ್ನು ಓದುತ್ತಿರುವ ಮಗುವಿಗೆ ಬೇಕಾಗಿರುವುದು. ನಂತರ ಜೀವನದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಲು ಸಹ ಇದು ಸಹಾಯಕವಾಗುತ್ತದೆ.
ಆದರೆ ಅತಿಯಾದ ಏಕಾಗ್ರತೆಯು ವ್ಯಕ್ತಿಯನ್ನು ಒಂದು ವಿಷಯದಲ್ಲಿ ಸಂಪೂರ್ಣವಾಗಿ ಮುಳುಗಿಸಬಹುದು. ಅಂಥ ವ್ಯಕ್ತಿಗೆ ಅನೇಕ ಕೆಲಸಗಳ ಮೇಲೆ ಒಂದೇ ಸಮಯದಲ್ಲಿ ಗಮನ ಹರಿಸುವುದು ಕಷ್ಟವಾಗಬಹುದು. ನಿಮಗೆ ಬೇಕಾಗಿರುವುದು ಸಮತೋಲನವಾದ ಏಕಾಗ್ರತೆ — ಅತಿಯಾದ ಏಕಾಗ್ರತೆ ಅಲ್ಲ.
ಓಂ ಮಂತ್ರ ಜಪವೂ ಏಕಾಗ್ರತೆಯನ್ನು ಹೆಚ್ಚಿಸುತ್ತದಲ್ಲವೆ? ಹಾಗಾದರೆ ಗಾಯತ್ರಿ ಮಂತ್ರದ ಬದಲು "ಓಂ" ಯಾಕೆ ಜಪಿಸಬಾರದು?
"ಓಂ" ಧ್ವನಿಯನ್ನು ದೀರ್ಘಕಾಲ ಜಪಿಸಿದರೆ, ಮನಸ್ಸನ್ನು ಅತಿಯಾಗಿ ಏಕಾಗ್ರಗೊಳಿಸುವ ಸಾಧ್ಯತೆ ಇದೆ. ಕೆಲವು ಗುರುಗಳು ಪ್ರಚಾರ ಮಾಡುವ ಓಂ ಆಧಾರಿತ ಧ್ಯಾನ ವಿಧಾನಗಳ ಬಗ್ಗೆ ನಡೆದ ಅಧ್ಯಯನಗಳು, ಅತಿಯಾದ ಏಕಾಗ್ರತೆಯಿಂದ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು ಎಂದು ತೋರಿಸಿವೆ.
ಪಾರಂಪರಿಕವಾಗಿ, ಲೋಕದಿಂದ ದೂರವಾಗಿ ಪರಮಾರ್ಥ ಸಾಧನೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡವರಿಗೆ ಮಾತ್ರ ಓಂ ಧ್ಯಾನಕ್ಕೆ ಅನುಮತಿ ಇತ್ತು. ಅವರು ಸನ್ಯಾಸಿಗಳು. ಅವರ ಏಕೈಕ ಗುರಿ ಲೋಕಬಂಧನದಿಂದ ಮುಕ್ತರಾಗುವುದು. ಅಂತಹವರಿಗೆ ಸಂಪೂರ್ಣ ಏಕಾಗ್ರ ಮನಸ್ಸು ಬಹಳ ಸಹಾಯಕ, ಏಕೆಂದರೆ ಅದು ಅವರನ್ನು ಶೀಘ್ರವಾಗಿ ಸಂಪೂರ್ಣ ಶಾಂತ ಮನಸ್ಸಿನ ಸ್ಥಿತಿಗೆ, ಅಂದರೆ ಪತಂಜಲಿ ಹೇಳುವ 'ನಿರುದ್ಧ ಚಿತ್ತ' ಸ್ಥಿತಿಗೆ, ಕರೆದೊಯ್ಯುತ್ತದೆ. ಅದು ಅಂತಿಮವಾಗಿ ಅವರು ಬಯಸುವ ಪರಮ ಸಾಧನೆಗೆ ದಾರಿ ಮಾಡಿಕೊಡುತ್ತದೆ.
ಆದರೆ, ಸಾಮಾನ್ಯ ಜೀವನ ನಡೆಸುವ ವ್ಯಕ್ತಿಗೆ, ಇದೇ 'ನಿರುದ್ಧ ಚಿತ್ತ' ಸ್ಥಿತಿ ಸಹಾಯಕವಾಗುವುದಕ್ಕಿಂತ ಅಡ್ಡಿಯಾಗಬಹುದು. ಏಕೆಂದರೆ ಅದು ದಿನನಿತ್ಯದ ಸಾಮಾನ್ಯ ಕಾರ್ಯಗಳಲ್ಲಿ ತೊಡಗಲು ಅವಕಾಶ ನೀಡುವುದಿಲ್ಲ. ಪುನಃ ಹೇಳುತ್ತೇನೆ, — ಏಕಾಗ್ರತೆ ಬೇಕು, ಆದರೆ ಸಂಪೂರ್ಣ ತಲ್ಲೀನತೆಯಲ್ಲ.
ಆದ್ದರಿಂದ, ಮಕ್ಕಳಿಗೆ ಓಂ ಧ್ಯಾನವನ್ನು ಕಲಿಸುವುದು ಸರಿಯಾದ ಆಯ್ಕೆಯಲ್ಲ. ಮತ್ತು ಮತ್ತೆ ಹೇಳುವುದೇನೆಂದರೆ — ಧ್ಯಾನವನ್ನು ತಾತ್ಕಾಲಿಕ ಸಮಸ್ಯೆ ಪರಿಹಾರವಾಗಿ ಬಳಸಬೇಡಿ.
ನಿಮ್ಮ ತರಗತಿಯಲ್ಲಿ ಮಕ್ಕಳು ಗದ್ದಲ ಮಾಡುತ್ತಿದ್ದರೆ, ಅವರ ಗಮನವನ್ನು ಯಾವುದಾದರೂ ಸೃಜನಾತ್ಮಕ ಚಟುವಟಿಕೆಗೆ ತಿರುಗಿಸಿ. ಅದು ಅವರನ್ನು ಶಾಂತಗೊಳಿಸುವುದರ ಜೊತೆಗೆ ಅವರ ಸಾಮರ್ಥ್ಯವನ್ನು ಅರಳಿಸಲು ಸಹಾಯ ಮಾಡುತ್ತದೆ.
ಮಕ್ಕಳಿಗೆ ಧ್ಯಾನ ಕಲಿಸಿ — ಆದರೆ "ಓಂ" ಮೇಲೆ ಅಲ್ಲ. ಓಂ ಅನ್ನು ವಿಶೇಷ ಉದ್ದೇಶಕ್ಕಾಗಿ ಕಾಯ್ದಿಡಿ.

© Dr. King, Swami Satyapriya 2026

No comments:
Post a Comment