ಬ್ಲೇಕ್ ಲೆಮೊಯಿನ್ ಎಂಬ ಗೂಗಲ್ನ ಮಾಜಿ ಉದ್ಯೋಗಿಗೆ ಇದೇ ಪ್ರಶ್ನೆಯು ಅವರ ಕೆಲಸ ಮತ್ತು ಗೌರವವನ್ನು ಕಳೆದುಕೊಳ್ಳುವಂತೆ ಮಾಡಿತು. ಈ ಬಗ್ಗೆ ಬಹುಶಃ ನೀವು ಓದಿರಬಹುದು.
2022 ರಲ್ಲಿ ಗೂಗಲ್ನ ಏಆಯ್ ಗಳಲ್ಲಿ ಒಂದಾದ 'ಲ್ಯಾಮ್ಡಾ' ಅನ್ನು ಪರೀಕ್ಷಿಸುತ್ತಿದ್ದಾಗ, ಬ್ಲೇಕ್ ಅವರಿಗೆ ಆ ಏಆಯ್ ಗೆ ಪ್ರಜ್ಞೆ ಇದೆ ಎಂದು ಅನಿಸಿತು!. ಅವರು ಅಷ್ಟಕ್ಕೇ ನಿಲ್ಲಲಿಲ್ಲ. ಬದಲಿಗೆ, ಆ ಏಆಯ್ ಯ ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದರು. ಅದು ಅವರು ತನ್ನ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿತು.
AI ವ್ಯವಸ್ಥೆಗಳ ಪ್ರಜ್ಞೆಯ ಬಗ್ಗೆ ಮಾತನಾಡುವ ಮೊದಲು, ನಮ್ಮ ಸ್ವಂತ ಪ್ರಜ್ಞಾಪೂರ್ವಕ ಅನುಭವವನ್ನು ಅರ್ಥಮಾಡಿಕೊಳ್ಳೋಣ.

ನಾವು ಪ್ರಜ್ಞಾಪೂರ್ವಕ ಅನುಭವವನ್ನು ಹೇಗೆ ಪಡೆಯುತ್ತೇವೆ ಎಂಬುದು ನರವಿಜ್ಞಾನಿಗಳಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಒಂದು ಒಗಟಾಗಿತ್ತು. ಫಂಕ್ಷನಲ್ ಎಂ-ಆರ್-ಐ ಸ್ಕ್ಯಾನರ್ಗಳಂತಹ ಆಧುನಿಕ ಸಾಧನಗಳ ಆವಿಷ್ಕಾರವಾದಾಗ, ನರವಿಜ್ಞಾನಿಗಳು ಮಾನವಮಿದುಳಿನ ವಿವಿಧ ಗ್ರಹಣ ಪ್ರಕ್ರಿಯೆಗಳನ್ನು ವಿವರಿಸಲು ಶಕ್ತರಾದರು. ಒಂದು ನಿರ್ದಿಷ್ಟ ಗ್ರಹಿಕೆಗೆ ಕಾರಣವಾಗಿರುವ ಮಿದುಳಿನ ನಿಖರವಾದ ಸ್ಥಾನವನ್ನು ಅವರು ಪತ್ತೆಹಚ್ಚಬಲ್ಲವರಾದರು.
ಆದರೆ, ಆರಂಭದಲ್ಲಿ, ಮಿದುಳಿನಾದ್ಯಂತ ಹರಡಿರುವ ಪ್ರದೇಶಗಳನ್ನು ಒಳಗೊಂಡಿರಬಹುದಾದ ಸಂಕೀರ್ಣ ಅನುಭವಗಳು ಹೇಗೆ ಸಾಕಾರಗೊಳ್ಳುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರಲಿಲ್ಲ.
ಉದಾಹರಣೆಗೆ, ನೀವು ಒಂದು ಮರವನ್ನು ನೋಡಿದಿರೆಂದುಕೊಳ್ಳಿ. ನೀವು ತಕ್ಷಣ ಆ ಮರವನ್ನು ಒಂದು ನಿರ್ದಿಷ್ಟ ಜಾತಿಯ ಮರ ಎಂದು ಗುರುತಿಸುತ್ತೀರಿ. ನರವಿಜ್ಞಾನಿಗಳು ಮರದ ಎಲೆಗಳು, ಅದರ ಹಣ್ಣುಗಳು, ಅದರ ಕಾಂಡ ಇತ್ಯಾದಿಗಳನ್ನು ಗುರುತಿಸುವ ಮಿದುಳಿನ ನಿರ್ದಿಷ್ಟ ಪ್ರದೇಶಗಳನ್ನು ಬೆರಳುಮಾಡಿ ತೋರಿಸಬಲ್ಲವರಾಗಿದ್ದರು.
ಆದರೆ ನಿಮ್ಮ ನೈಜ ಅನುಭವವು ಮಿದುಳಿನ ವಿವಿಧ ಪ್ರದೇಶಗಳನ್ನು ಬಳಸಿ ಸಂಸ್ಕರಿಸಲ್ಪಡುತ್ತವೆ. ಆದರೆ, 'ಆಹಾ! ಅದು ಮಾವಿನ ಮರ!' ಎಂಬ ಅನುಭವವನ್ನು ನಿಮಗೆ ತಲುಪಿಸುವ, ಮರದ ಸಂಪೂರ್ಣ ಚಿತ್ರವನ್ನು ಒಟ್ಟುಗೂಡಿಸುವ, ಯಾವುದೇ ಒಂದು ನಿರ್ದಿಷ್ಠ ಪ್ರದೇಶವು ಮಿದುಳಿನಲ್ಲಿ ಇಲ್ಲ.
ನರವಿಜ್ಞಾನಿಗಳು ಈ ಸಮಸ್ಯೆಯನ್ನು 'ದಿ ಬೈಂಡಿಂಗ್ ಪ್ರಾಬ್ಲಮ್' ಎಂದು ಕರೆದರು. ಅಂದರೆ ಮಿದುಳಿನಾದ್ಯಂತ ಹರಡಿರುವ ಮಾಹಿತಿಯ ತುಣುಕುಗಳನ್ನು ಒಟ್ಟುಹಾಕಿ, ಅವುಗಳನ್ನು ಪರಸ್ಪರ ಹೊಂದಿಸುವ ಸಮಸ್ಯೆ.
1900 ರ ದಶಕದ ಕೊನೆಯ ಭಾಗದಲ್ಲಿ, ಬರ್ನಾರ್ಡ್ ಬಾರ್ಸ್ ಎಂಬ ಅಮೇರಿಕನ್ ನರವಿಜ್ಞಾನಿ ಈ ವಿದ್ಯಮಾನವನ್ನು ವಿವರಿಸಲು 'ಗ್ಲೋಬಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಸಿದ್ಧಾಂತವನ್ನು ಮುಂದಿಟ್ಟರು. ಆ ಸಿದ್ಧಾಂತವು ಬಹಳ ರೂಪಕಾತ್ಮಕವಾಗಿತ್ತು.
ಬಾರ್ಸ್ ಅವರ ರೂಪಕವು ಬಹಳ ಟೀಕೆಗೆ ಒಳಗಾಯಿತು. ಏಕೆಂದರೆ ಅದು, ಅನುಭವಕ್ಕೆ ಒಳಗಾಗುವ ಒಂದು ಪ್ರತ್ಯೇಕ ಶಕ್ತಿ ಇದೆ ಎಂದು ಸೂಚಿಸುವಂತೆ ತೋರಿತು. ವಿಜ್ಞಾನಿಗಳು ಅಂತಹ ಯಾವುದೇ ನಿಗೂಢಶಕ್ತಿಯ ಅಸ್ತಿತ್ವವನ್ನು ಒಪ್ಪುವುದಿಲ್ಲ.
ನಂತರ 'ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಪರಿಷ್ಕೃತ ಸಿದ್ಧಾಂತ ಬಂತು. ಅದನ್ನು ಈ ದಿನಗಳಲ್ಲಿ ನಮ್ಮ ಪ್ರಜ್ಞಾಪೂರ್ವಕ ಅನುಭವಗಳಿಗೆ ಒಂದು ವಿವರಣೆಯಾಗಿ ಬಹುತೇಕವಾಗಿ ಒಪ್ಪಿಕೊಳ್ಳಲಾಗಿದೆ.
ಆದರೆ ಆ ವಿವರಣೆ ಡೇವಿಡ್ ಚಾಮರ್ಸ್ ಅವರಂತಹ ಕಾಗ್ನೀಟಿವ್ ಫಿಲಾಸಫರ್ ಗಳನ್ನು ತೃಪ್ತಿಪಡಿಸಲಿಲ್ಲ. ನರವಿಜ್ಞಾನಿಗಳು ಪರಿಹರಿಸಿರುವುದು ಪ್ರಜ್ಞೆಯ ಬಗೆಗಿನ ಕೇವಲ ಒಂದು 'ಸುಲಭವಾದ ಸಮಸ್ಯೆ' ಮಾತ್ರ ಎಂದು ಅವರು ಹೇಳಿಯೇಬಿಟ್ಟರು!. ಮಾನವ ಅನುಭವದ ಅನೇಕ ಆಸಕ್ತಿದಾಯಕ ಮುಖಗಳು ಇನ್ನೂ ವಿವರಿಸಲಾಗದೆ ಉಳಿದಿವೆ ಎಂದು ಅವರು ಪ್ರತಿಪಾದಿಸಿದರು. ಅವರು ಅವುಗಳನ್ನು ಪ್ರಜ್ಞೆಯ 'ಕಠಿಣ ಸಮಸ್ಯೆ' - Hard problem of consciousness - ಎಂದು ಕರೆದರು.
ಈ ಹಗ್ಗ ಜಗ್ಗಾಟ ನಡೆಯುತ್ತಲೇ ಹೋಯಿತು. ನಾವು ಎಲ್ಲವನ್ನೂ ವಿವರಿಸಬಲ್ಲೆವು ಎಂದು ನರವಿಜ್ಞಾನಿಗಳು ಬೀಗಿದರೆ, ನೀವು ವಿವರಿಸುತ್ತಿರುವುದು ಅಪೂರ್ಣ ಎಂದು ಚಾಮರ್ಸ್ ನಂತಹ ತತ್ವಜ್ಞಾನಿಗಳು ಪ್ರತಿಸವಾಲು ಹಾಕಿದರು.
ಚಾಮರ್ಸ್ ಅವರಂತಹ ತತ್ವಜ್ಞಾನಿಗಳು ಈ 'ಪ್ರಜ್ಞೆ' ಎಂಬ ಪದವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದು ನನಗೆ ಖಚಿತವಿಲ್ಲ. ತಮ್ಮ ಒಂದು ಭಾಷಣದಲ್ಲಿ, ಚಾಮರ್ಸ್ ಅವರು ಪ್ರಜ್ಞೆಯನ್ನು ನಿರಂತರವಾಗಿ ಚಲಿಸುವ ಒಂದು ಆಂತರಿಕ ಚಲನಚಿತ್ರ ಎಂದು ವಿವರಿಸುತ್ತಾರೆ. ಅದು ಒಂದು ವ್ಯಕ್ತಿನಿಷ್ಠ (subjective) ಅನುಭವವೆಂದೇ ಅವರ ವಾದ. ಅವರ ಪ್ರಕಾರ, ಅದನ್ನು ಮೆದುಳಿನ ಯಾವುದೇ ಕ್ರಿಯೆಯ ಆಧಾರದಲ್ಲಿ ವಿವರಿಸಲಾಗುವುದಿಲ್ಲ.
ಚಾಮರ್ಸ್ ಅವರು ಎಷ್ಟು ಸರಿ ಎಂದು ನಿರ್ಧರಿಸುವ ಮೊದಲು ಕೆಲವು ವಾಸ್ತವಿಕ ಅಂಶಗಳನ್ನು ಗಮನಿಸೋಣ.
ಮಿದುಳು ತನ್ನೊಳಗೆ ಹಂಚಿಹೋಗಿರುವ ಮಾಹಿತಿಯನ್ನು ಹೇಗೆ ಒಟ್ಟುಗೂಡಿಸುತ್ತದೆ ಎಂಬುದನ್ನು ವಿವರಿಸಲು ಗ್ಲೋಬಲ್ ನ್ಯೂರೋನಲ್ ವರ್ಕ್ಸ್ಪೇಸ್ ಸಿದ್ಧಾಂತವು ಸಮರ್ಥವಾಗಿದೆ. ಆದ್ದರಿಂದ, ಮಿದುಳು ಕನಿಷ್ಠ ಪಕ್ಷ ಪ್ರಜ್ಞಾಪೂರ್ವಕ ಅನುಭವದ ಯಾವುದೋ ಒಂದು ರೂಪವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಾಯಿತು.
ಮಿದುಳಿನ ಕೆಲವು ಪ್ರದೇಶಗಳಿಗೆ ಎಲೆಕ್ಟ್ರೋಡ್ಗಳನ್ನು ಅಳವಡಿಸುವ ಮೂಲಕ ಮತ್ತು ಅದನ್ನು ವಿದ್ಯುತ್-ಕಾಂತೀಯವಾಗಿ ಉತ್ತೇಜಿಸುವ ಮೂಲಕ, ನಿರ್ದಿಷ್ಟ ಅನುಭವಗಳನ್ನು ಪ್ರೇರೇಪಿಸಲು ಸಾಧ್ಯವಿದೆ. ಕೆಲವು ಮಾದಕ ದ್ರವ್ಯಗಳನ್ನು ಸೇವಿಸುವುದರಿಂದಲೂ, ಒಬ್ಬ ವ್ಯಕ್ತಿಯು ವಿವಿಧ ಅನುಭವಗಳನ್ನು ಪಡೆಯಬಹುದು. ಇದೆಲ್ಲದರ ಹಿಂದಿರುವ ಮಿದುಳಿನ ಕಾರ್ಯವಿಧಾನಗಳನ್ನು ಸಾಕಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಇದರರ್ಥ, ಮಿದುಳು ಪ್ರಜ್ಞೆಯ ಒಂದು ವಾಹನವಾಗಬಲ್ಲದು.
ಕೆಲವು ಸಂಶೋಧಕರು ಗಾಢವಾದ ನಂಬಿಕೆಯು ಯಾವುದೇ ಬಾಹ್ಯ ವಸ್ತುವಿನ ಅವಲಂಬನವಿಲ್ಲದೇ ಮಿದುಳಿನಲ್ಲಿ ನಿರ್ದಿಷ್ಟ ಅನುಭವಗಳನ್ನು ಸೃಷ್ಟಿಸುವಂತೆ ಮಾಡಬಲ್ಲದು ಎಂಬುದನ್ನು ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಲ್ಲಿ ನಿಷ್ಠಾವಂತ ಭಕ್ತರು ತಮ್ಮ ನಾಲಿಗೆಯನ್ನು ಚುಚ್ಚಿಕೊಳ್ಳುತ್ತಾರೆ. ತಮ್ಮ ಬೆನ್ನಿನ ಆಳಕ್ಕೆ ಚುಚ್ಚಿದ ಕೊಕ್ಕೆಯ ಮೂಲಕ ಕಂಬದಿಂದ ತಮ್ಮನ್ನುತಾವು ನೇತುಹಾಕಿಕೊಳ್ಳುತ್ತಾರೆ. ಆದರೂ ಅವರು ಯಾವುದೇ ನೋವಿನ ಸಂವೇದನೆಗಳಿಲ್ಲದೇ ಆಧ್ಯಾತ್ಮಿಕ ಅನುಭವದಲ್ಲಿ ಮುಳುಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಿದುಳು ಅಫೀಮಿನಂತಹ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ ಎಂದು ಕಂಡುಬಂದಿದೆ. ಇದರರ್ಥ, ಮಿದುಳು ನಿರೀಕ್ಷಿಸಿರದ ರೀತಿಯಲ್ಲಿ ಸಂಪೂರ್ಣವಾಗಿ ಅನುಭವಗಳನ್ನು ಬದಲಾಯಿಸಬಲ್ಲದು.
ಅದೇ ಮಿದುಳಿಗೆ ಸಾಮಾನ್ಯ ಅರಿವಳಿಕೆ (ಜನರಲ್ ಅನೆಸ್ತೇಷಿಯಾ) ನೀಡಿದಾಗ, ಆ ವ್ಯಕ್ತಿಯು ಯಾವುದೇ ವಿಷಯವನ್ನು ಅನುಭವಿಸಲು ಸಂಪೂರ್ಣವಾಗಿ ಅಸಮರ್ಥನಾಗುತ್ತಾನೆ. ಇದರರ್ಥ, ಪ್ರಜ್ಞಾಪೂರ್ವಕ ಅನುಭವದಲ್ಲಿ ಮಿದುಳು ಪ್ರಮುಖ ಪಾತ್ರವನ್ನು ಹೊಂದಿದೆ. ಮಿದುಳು ಸಕ್ರಿಯವಾಗಿಲ್ಲದಿದ್ದರೆ, ಒಬ್ಬ ವ್ಯಕ್ತಿಗೆ ಯಾವುದೇ ಅನುಭವ ಹೊಂದಲು ಸಾಧ್ಯವಿಲ್ಲ - ವ್ಯಕ್ತಿನಿಷ್ಠವಾಗಿರಲಿ ಅಥವಾ ಬೇರೆ ಯಾವುದೇ ರೀತಿಯದ್ದಾಗಿರಲಿ.
ಈ ಎಲ್ಲಾ ಅವಲೋಕನಗಳ ಅರ್ಥವೇನೆಂದರೆ:
- ಬಾಹ್ಯ ಇನ್ಪುಟ್ಗಳನ್ನು ಸಂಯೋಜಿಸುವ ಮೂಲಕ ಪ್ರಜ್ಞಾಪೂರ್ವಕ ಅನುಭವವನ್ನು ನೀಡಲು ಮಿದುಳು > ಸಾಮರ್ಥ್ಯವನ್ನು ಹೊಂದಿದೆ. ಮತ್ತು ಅದರ ಕಾರ್ಯವಿಧಾನವನ್ನು ಈಗ ಸಾಕಷ್ಟು ಚೆನ್ನಾಗಿ > ಅರ್ಥಮಾಡಿಕೊಳ್ಳಲಾಗಿದೆ.
- ಯಾವುದೇ ಸಂವೇದನಾ ಇನ್ಪುಟ್ಗಳು ಸಂಪೂರ್ಣವಾಗಿ ಇಲ್ಲದಿದ್ದಾಗಲೂ, ಬಾಹ್ಯ ಪದಾರ್ಥಗಳು ಅಥವಾ > ವಿಧಾನಗಳ ಸಹಾಯದಿಂದ ಮಿದುಳು ಅನುಭವಗಳನ್ನು ಉಂಟಾಗಿಸಬಲ್ಲದು.
- ಬಾಹ್ಯ ಅಥವಾ ಆಂತರಿಕ ಯಾವುದೇ ಇನ್ಪುಟ್ಗಳನ್ನು ಮೀರಿ, ಮಿದುಳಿನ ಸ್ವಂತ ಸ್ಥಿತಿಯ ಆಧಾರದ ಮೇಲೆ ಮಿದುಳು > ಅನುಭವಗಳನ್ನು ಬದಲಾಯಿಸಲೂಬಲ್ಲದು.
- ಕಾರ್ಯನಿರ್ವಹಿಸುವ ಮಿದುಳು ಇಲ್ಲದೆ ಪ್ರಜ್ಞೆಯು ಉಂಟಾಗಲು ಸಾಧ್ಯವಿಲ್ಲ.
ವ್ಯಕ್ತಿನಿಷ್ಠ ಎಂದು ಕರೆಯಲಾಗುವ ಅನುಭವವು ಮಿದುಳಿನಲ್ಲೇ ಸಂಭವಿಸುತ್ತದೆ ಎಂದು ಹೇಳಲು ಇವು ಸಾಕಲ್ಲವೇ?
ಆದರೆ ಚಾಮರ್ಸ್ ಇದನ್ನು ಒಪ್ಪುವುದಿಲ್ಲ. 'ಈ ವಿವರಣೆಗಳು ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮಾತ್ರ ವಿವರಿಸುತ್ತವೆ, ಆದರೆ ವ್ಯಕ್ತಿನಿಷ್ಠ ಅನುಭವವನ್ನು ವಿವರಿಸಲು ವಿಫಲವಾಗುತ್ತವೆ' ಎಂದು ಅವರು ದೃಢವಾಗಿ ನಂಬುತ್ತಾರೆ. ಅವರು ಮಿದುಳಿನ ಹೊರತಾಗಿರುವ ಒಂದು ರಹಸ್ಯಮಯ ವಿವರಣೆಯನ್ನು ಹುಡುಕುತ್ತಿದ್ದಾರೆ.
ಚಾಮರ್ಸ್ ಅವರು ತಮ್ಮ ಹುಡುಕಾಟವನ್ನು ಸ್ವಲ್ಪ ವಿಸ್ತರಿಸಿ ಧ್ಯಾನದ ಅನುಭವಗಳ ಬಗ್ಗೆ ಮಾತನಾಡಿದರೆ, ಬಹುಶಃ ನಾನು ಅವರೊಂದಿಗಿದ್ದೇನೆ. ಒಬ್ಬರು ಮನಸ್ಸಿನ ಗಡಿಗಳನ್ನು ದಾಟಿದಾಗ, ಅಥವಾ ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ ಧ್ಯಾನದ ಅತ್ಯುನ್ನತ ಅನುಭವಗಳು ಸಿದ್ಧಿಸುತ್ತವೆ. ಆಗ ಮಿದುಳು ಬಹುತೇಕ ಕಾರ್ಯನಿರ್ವಹಿಸದ ಕಾರಣ, ಅಂತಹ ಅನುಭವಗಳು ಮಿದುಳಿನೊಳಗೆ ಸಂಭವಿಸುತ್ತವೆ ಎಂದು ನಾವು ಮಾತನಾಡುವ ಹಾಗಿಲ್ಲ.
ತಮಾಷೆಯೆಂದರೆ ಅಲ್ಲಿಯೂ ಸಹ ವ್ಯಕ್ತಿನಿಷ್ಠ ಅನುಭವಗಳ ಬಗ್ಗೆ ಮಾತನಾಡಲು ಯಾವುದೇ ಅವಕಾಶವಿಲ್ಲ. ಏಕೆಂದರೆ, ಅದು ವ್ಯಕ್ತಿನಿಷ್ಠತೆಯನ್ನು ಮೀರಿದ ಸ್ಥಿತಿಯಾಗಿದೆ.
ನಾನು ಪ್ರಜ್ಞೆಯನ್ನು ಒಬ್ಬ ನರವಿಜ್ಞಾನಿಯ ದೃಷ್ಠಿಕೋನದಿಂದ ನೋಡುತ್ತೇನೆ. ಪ್ರಜ್ಞೆಯನ್ನು ಹೊಂದಿರಬೇಕಾದರೆ, ಒಂದು ವ್ಯವಸ್ಥೆಯು ಕನಿಷ್ಠ ಪಕ್ಷ ತನ್ನ ಮಾನಸಿಕ ಸ್ಥಿತಿಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ.
ಕೇವಲ ಆಂತರಿಕ ಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯವಿದ್ದರಷ್ಟೇ ಸಾಲದು, ಇನ್ನೂ ಅನೇಕ ಸಾಮರ್ಥ್ಯಗಳನ್ನು ಒಂದು ಪ್ರಜ್ಞಾವಂತವೆನಿಸಿಕೊಳ್ಳುವ ವ್ಯವಸ್ಥೆಯು ಹೊಂದಿರಬೇಕು.
ಮೂಲ ಪ್ರಶ್ನೆಗೆಬರುವುದಾದರೆ, ಏಆಯ್ ವ್ಯವಸ್ಥೆಗಳಿಗೆ ಆ ಸಾಮರ್ಥ್ಯಗಳಿವೆಯೇ?
ಸಾರ್ವಜನಿಕವಾಗಿ ಲಭ್ಯವಿರುವ ಈಗಿನ ಏಆಯ್ ಆವೃತ್ತಿಗಳಿಗೆ ಖಂಡಿತಾ ಇಲ್ಲ. ಅವು ಬುದ್ಧಿವಂತಿಕೆಯ ಒಂದು ತೋರಿಕೆಯನ್ನು ಪ್ರದರ್ಶಿಸಬಹುದು. ಆದರೆ:
- ಇನ್ಪುಟ್ಗೆ ಅನುಗುಣವಾಗಿ ನಿರಂತರವಾಗಿ ಬದಲಾಯಿಸಬಹುದಾದ ಅಥವಾ ನವೀಕರಿಸಬಹುದಾದ ಯಾವುದೇ ಸ್ಥಿತಿಗಳು > ಅವುಗಳಲ್ಲಿ ಅಡಕವಾಗಿಲ್ಲ. ಬ್ಲೇಕ್ ಲೆಮೊಯಿನ್ ವರದಿ ಮಾಡಿದಂತೆ, ಸಂವಹನದ ಸಮಯದಲ್ಲಿ 'ಇನ್ಪುಟ್ಗಳ > ಆಧಾರದ ಮೇಲೆ ತಾನು ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳಬಲ್ಲೆ' ಎಂದು ಏಆಯ್ ಹೇಳಿಕೊಂಡದ್ದು > ಮೇಲ್ನೋಟಕ್ಕೆ ಕಂಡುಬಂದಿದ್ದರೂ ಸಹ ಅದು ನಿಜವಾಗಿರದು.
- ಇಂದಿನ ಏಆಯ್ ಗಳಿಗೆ ಭಯ, ಸಂತೋಷ, ಇಷ್ಟಗಳು, ಅನಿಷ್ಟಗಳು ಅಥವಾ ಅಂತಹ ಇತರ ಭಾವನೆಗಳಿಗೆ > ಅನುಗುಣವಾಗಿ ಬದಲಾಗುವ ಯಾವುದೇ ಸ್ಥಿತಿಗಳಿಲ್ಲ.
- ಅವುಗಳು ಅತ್ಯಂತ ಸೀಮಿತವಾದ ಇನ್ಪುಟ್ ಕಾರ್ಯವಿಧಾನಗಳನ್ನು ಹೊಂದಿವೆ. ಸದ್ಯಕ್ಕೆ ಅವು ಪ್ರಾಂಪ್ಟ್ಗಳನ್ನು > ಓದಬಲ್ಲವು ಅಥವಾ ಕೇಳಿಸಿಕೊಳ್ಳಬಲ್ಲವು. ಅವು ಚಿತ್ರಗಳನ್ನು 'ನೋಡಬಲ್ಲವು', ಫೈಲ್ ಗಳನ್ನು > ಓದಬಲ್ಲವು, ಅಷ್ಟೇ.
ಹಾಗಾಗಿ, ಬ್ಲೇಕ್ ಲೆಮೊಯಿನ್ ಅವರ ಅನುಭವ ನಿಜವೆಂದು ಹೇಳಲು ಆಧಾರಗಳಿಲ್ಲ. ಅಷ್ಟಕ್ಕೂ, ಆಂಶಿಕ ಮಾಹಿತಿಯನ್ನೇ ಆಧರಿಸಿ ಬಡಾಯಿಕೊಚ್ಚಿಕೊಳ್ಳುವುದರಲ್ಲಿ ಏಆಯ್ ಗಳು ನಿಸ್ಸೀಮರು. ಮನುಷ್ಯನಂತೆಯೇ ವರ್ತಿಸಿ ಹಾದಿತಪ್ಪಿಸುವುದರಲ್ಲಿ ಅವರಿಗೆ ಸಾಠಿಯಿಲ್ಲ!
ಆದರೆ ಭವಿಷ್ಯದ ಏಆಯ್ ಗಳು ಪ್ರಜ್ಞೆಯನ್ನು ಹೊಂದಿರಬಹುದು ಎಂಬ ಸಾಧ್ಯತೆಯನ್ನು ನಾನು ತಳ್ಳಿಹಾಕುವುದಿಲ್ಲ. ಕನಿಷ್ಠ, ಮಿದುಳಿಗೇ ಸೀಮಿತವಾಗಿರುವ ಪ್ರಜ್ಞೆಯನ್ನಾದರೂ.

--------------------------------------------------------------------
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.

© Dr. King, Swami Satyapriya 2026
No comments:
Post a Comment