ಹಿಂದಿನ ಸಂಚಿಕೆಯಲ್ಲಿ, ಪ್ರಾಚೀನ-ಭಾರತೀಯರು ಪ್ರಜ್ಞೆಯ ಪರಿಕಲ್ಪನೆಯನ್ನು ಹೇಗೆ ನೋಡುತ್ತಿದ್ದರು, ಎಂಬುದರ ಕುರಿತು ನಾವು ಚರ್ಚಿಸುತ್ತಿದ್ದೆವು. ಒಂದು ನಿರ್ದಿಷ್ಟ ಉದಾಹರಣೆಯಾಗಿ, ನಾನು ಉಪನಿಷತ್ತುಗಳಲ್ಲಿ ಒಂದಾದ, 'ಮಾಂಡೂಕ್ಯ-ಉಪನಿಷತ್' ಅನ್ನು ತೆಗೆದುಕೊಂಡಿದ್ದೆ. ಮಾಂಡೂಕ್ಯ-ಉಪನಿಷತ್ತು ಅಥರ್ವವೇದದ ಒಂದು ಭಾಗವಾಗಿದೆ.
ಈ ಸಣ್ಣ ಉಪನಿಷತ್ತು, ಪರಮ ಸತ್ಯವು ಪ್ರಜ್ಞೆಯ ನಾಲ್ಕು ಸ್ಥಿತಿಗಳಲ್ಲಿ ಹೇಗೆ ಪ್ರಕಟವಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಇದು ಆ ಪರಮ ಸತ್ಯವನ್ನು 'ಓಂಕಾರ' ಎಂದು ಕರೆಯುತ್ತದೆ. ಇದು, ಪ್ರಜ್ಞೆಯ ನಾಲ್ಕು ಸ್ಥಿತಿಗಳನ್ನು ಜಾಗೃತ, ಸ್ವಪ್ನ, ಸುಷುಪ್ತಿ ಮತ್ತು ತುರೀಯ ಎಂದು ಗುರುತಿಸುತ್ತದೆ.
ಈ ಸ್ಥಿತಿಗಳು, ಆ ಓಂಕಾರವು ಪಡೆದುಕೊಂಡಿರುವ ಅಸಂಖ್ಯಾತ ರೂಪಗಳಲ್ಲಿ ಅಸ್ತಿತ್ವದಲ್ಲಿವೆ. ನಾವು ಮೊದಲು ಚರ್ಚಿಸಿದಂತೆ, ಓಂಕಾರವು ದೇಶ ಮತ್ತು ಕಾಲಕ್ಕೆ ಮೀರಿದ್ದರಿಂದ ಇದು ಖಂಡಿತವಾಗಿ ಸಾಧ್ಯ. ಓಂಕಾರದ ವಿವಿಧ ರೂಪಗಳೇ ಬ್ರಹ್ಮಾಂಡದಾದ್ಯಂತ ವ್ಯಾಪಿಸಿರುವ ಜೀವಿಗಳು. ಆ ರೂಪಗಳು ದೇಶ ಮತ್ತು ಕಾಲದ ನಿಯಮಗಳಿಗೆ ಒಳಪಟ್ಟಿರುವುದರಿಂದ, ಅವು ಒಂದು ಬಾರಿಗೆ ಕೇವಲ ಒಂದು ಸ್ಥಿತಿಯಲ್ಲಿ ಮಾತ್ರ ಇರಲು ಸಾಧ್ಯ.
ಈ ಸಂಚಿಕೆಯಲ್ಲಿ, ನಾವು ಈ ನಾಲ್ಕು ಸ್ಥಿತಿಗಳ ಪೈಕಿ ಮೊದಲ ಮೂರು ಸ್ಥಿತಿಗಳ ಬಗ್ಗೆ ತಿಳಿದುಕೊಳ್ಳೋಣ.

ಎಲ್ಲಕ್ಕಿಂತ ಮೊದಲನೆಯ ಸ್ಥಿತಿಯೇ ಎಚ್ಚರದ ಸ್ಥಿತಿ, ಅಥವಾ ಪ್ರಜ್ಞೆಯ 'ಜಾಗೃತ' ಸ್ಥಿತಿ ಎಂದು ಕರೆಯಲ್ಪಡುವಂತಹುದು. ಈ ಸ್ಥಿತಿಯಲ್ಲಿರುವಾಗ, ಜೀವಿಯು ತನ್ನ ದೇಹದ ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸುತ್ತದೆ.
ಇದು ತನ್ನ ದೇಹದ ಹೊರಗಿನ ಪ್ರಪಂಚದಿಂದ ಮಾಹಿತಿಯನ್ನು ಸಂಗ್ರಹಿಸಲು ಕಣ್ಣುಗಳು, ಕಿವಿಗಳು ಮುಂತಾದ ತನ್ನ 5 ಜ್ಞಾನೇಂದ್ರಿಯಗಳನ್ನು ಬಳಸುತ್ತದೆ. ಹಾಗೆ ಪಡೆದ ಮಾಹಿತಿಯನ್ನು ಅದು ತನ್ನ ಮನಸ್ಸು, ಬುದ್ಧಿ, ಅಹಂಕಾರ ಮತ್ತು ಇತರ ಮಾನಸಿಕ ಸಾಮರ್ಥ್ಯಗಳನ್ನು ಬಳಸಿ ಸಂಸ್ಕರಿಸುತ್ತದೆ.
ಮಾಹಿತಿ ಸಂಸ್ಕರಣೆಯಾದ ನಂತರ, ದೇಹವು ಆ ಬಾಹ್ಯ ವಸ್ತುಗಳನ್ನು ಅನುಭವಿಸಲು ಕೈಗಳು, ಕಾಲುಗಳು ಮುಂತಾದ 5 ಕರ್ಮೇಂದ್ರಿಯಗಳನ್ನು ಬಳಸುತ್ತದೆ. ಪ್ರಾಣ ಮುಂತಾದ ಐದು ಶಕ್ತಿಗಳು ಈ ಪ್ರಕ್ರಿಯೆಯಲ್ಲಿ ದೇಹ ಮತ್ತು ಮನಸ್ಸಿಗೆ ಬೆಂಬಲ ನೀಡುತ್ತವೆ.
ಮೂಲಭೂತವಾಗಿ, ಜಾಗೃತ ಎಂಬುದು ದೇಹದ ಹೊರಗೆ ಇರುವ ಸ್ಥೂಲ ವಸ್ತುಗಳೊಂದಿಗೆ ವ್ಯವಹರಿಸುವ ಪ್ರಜ್ಞೆಯ ಸ್ಥಿತಿಯಾಗಿದೆ.
ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ.
ಇದನ್ನೇ ನರವಿಜ್ಞಾನವು ಹೇಗೆ ನೋಡುತ್ತದೆ?
ನರವಿಜ್ಞಾನದ ಪರಿಭಾಷೆಯಲ್ಲಿ, ಇದನ್ನು access consciousness ಎಂದು ಕರೆಯಲಾಗುತ್ತದೆ. ದೇಹ ಮತ್ತು ಮೆದುಳು ಈ ರೀತಿಯ ಪ್ರಜ್ಞೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಕುರಿತು ನರವಿಜ್ಞಾನಿಗಳು ಸಾಕಷ್ಟು ತಿಳಿದುಕೊಂಡಿದ್ದಾರೆ.
ಬಾಹ್ಯ ಜ್ಞಾನೇಂದ್ರಿಯಗಳಿಂದ ಬರುವ ಮಾಹಿತಿಯನ್ನು ಸಂಸ್ಕರಿಸುವ ವಿವಿಧ ವಿಶಿಷ್ಟ ಭಾಗಗಳು ಮೆದುಳಿನಲ್ಲಿವೆ. ಮಾಹಿತಿ ಸಂಸ್ಕರಣೆಯಾದ ನಂತರ, ಬಂದ ಮಾಹಿತಿ, ಮೆದುಳಿನ ಸ್ಥಿತಿ ಮತ್ತು ವಿವಿಧ ನಿರ್ಧರಣಾ ಕೇಂದ್ರಗಳ ಮೌಲ್ಯಮಾಪನವನ್ನು ಆಧರಿಸಿ ಮೆದುಳು, ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಅಂತಿಮವಾಗಿ ಬಾಹ್ಯ ಕರ್ಮೇಂದ್ರಿಯಗಳನ್ನು ಸೂಕ್ತ ಕಾರ್ಯಗಳಲ್ಲಿ ತೊಡಗಿಸಲು ಮೆದುಳಿನ Motor regions ಗಳನ್ನು ಅವಶ್ಯವಿದ್ದಂತೆ ಸಕ್ರಿಯಗೊಳಿಸುತ್ತದೆ.
ಉಪನಿಷತ್ತು, 'ಸ್ವಪ್ನ' ಅಥವಾ ಕನಸಿನ ಸ್ಥಿತಿ ಎಂದು ಕರೆಯಲಾಗುವ ಪ್ರಜ್ಞೆಯ ಎರಡನೆಯ ರೂಪದ ಬಗ್ಗೆ ಮಾತನಾಡುತ್ತದೆ. ಇಡೀ ನಾಟಕವು ಮನಸ್ಸಿನೊಳಗೆ ನಡೆಯುತ್ತದೆ ಎಂಬುದನ್ನು ಹೊರತುಪಡಿಸಿ, ಇದು ಬಹುಮಟ್ಟಿಗೆ ಎಚ್ಚರದ ಸ್ಥಿತಿಯನ್ನೇ ಹೋಲುತ್ತದೆ.
ಬಾಹ್ಯ ಸ್ಥೂಲ-ವಸ್ತುಗಳ ಜಾಗದಲ್ಲಿ, ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಸೂಕ್ಷ್ಮ ವಸ್ತುಗಳು ಇರುತ್ತವೆ. ಸ್ಥೂಲ ಜ್ಞಾನೇಂದ್ರಿಯಗಳ ಬದಲಿಗೆ, ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ಸೂಕ್ಷ್ಮ ಆಂತರಿಕ ಇಂದ್ರಿಯಗಳಿರುತ್ತವೆ. ಈ ಆಂತರಿಕ ಇಂದ್ರಿಯಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳ ಮೇಲೆ ಕೆಲಸ ಮಾಡಿ ಮನಸ್ಸಿನಿಂದಲೇ ಸೃಷ್ಟಿಸಲ್ಪಟ್ಟ ಫಲಿತಾಂಶಗಳನ್ನು ನೀಡುತ್ತವೆ.
ಎಚ್ಚರದ ಸ್ಥಿತಿಯಲ್ಲಿರುವ ವ್ಯಕ್ತಿಯು ಬಾಹ್ಯ ವಸ್ತುವನ್ನು ತನ್ನ ಅಂಗಾಂಗಗಳನ್ನು ಬಳಸಿ , ತನ್ನ ಮಾನಸಿಕ ಸಾಮರ್ಥ್ಯಗಳಿಂದ ಹೇಗೆ ಅನುಭವಿಸುತ್ತಾನೋ, ಹಾಗೆಯೇ ಕನಸಿನಲ್ಲಿ ಸೃಷ್ಟಿಯಾದ ವ್ಯಕ್ತಿಯೂ ಕನಸಿನಲ್ಲೇ ಸೃಷ್ಟಿಯಾದ ವಸ್ತುಗಳನ್ನು ಅನುಭವಿಸುತ್ತಾನೆ. ಬಾಹ್ಯ ಪ್ರಪಂಚಕ್ಕೂ ಮತ್ತು ಕನಸಿನಲ್ಲಿ ಸೃಷ್ಟಿಯಾದ ಆಂತರಿಕ ಪ್ರಪಂಚಕ್ಕೂ ನಿಕಟವಾದ ಸಾಮ್ಯತೆಯಿದೆ.
ಉಪನಿಷತ್ತು ಇದನ್ನು ಹೀಗೆ ವಿವರಿಸುತ್ತದೆ.
ನರವಿಜ್ಞಾನವೂ ಸಹ ಇದನ್ನು ಬಹುಮಟ್ಟಿಗೆ ಇದೇ ರೀತಿಯಲ್ಲಿ ನೋಡುತ್ತದೆ, ಆದರೆ ಉಪನಿಷತ್ತಿನ ಅಮೂರ್ತ ಶಬ್ದಗಳ ಬದಲಿಗೆ ಮೆದುಳಿನ ನಿರ್ದಿಷ್ಟ ಭಾಗಗಳನ್ನು ಬಳಸುತ್ತದೆ ಅಷ್ಟೆ.
ಮೆದುಳಿನೊಳಗೆ ಮೊದಲೇ ಸಂಗ್ರಹವಾಗಿರುವ ವಿವಿಧ ನೆನಪುಗಳ ನಡುವಿನ ಯಾದೃಚ್ಛಿಕ (Random) ಸಂವಹನದ ಫಲವಾಗಿ ಕನಸಿನ ಪ್ರಪಂಚವು ಸಂಪೂರ್ಣವಾಗಿ ಮೆದುಳಿನಿಂದಲೇ ಸೃಷ್ಟಿಸಲ್ಪಡುತ್ತದೆ ಎಂದು ನರವಿಜ್ಞಾನವು ಹೇಳುತ್ತದೆ.
ವಸ್ತುಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟಿರುತ್ತವೆ ಎಂಬುದನ್ನು ಹೊರತುಪಡಿಸಿ, ಉಳಿದೆಲ್ಲವೂ ಬಹುಮಟ್ಟಿಗೆ ಎಚ್ಚರದ ಸ್ಥಿತಿಯಂತೆಯೇ ಇರುತ್ತದೆ. ಮೆದುಳಿನ ಅದೇ ಸಂಸ್ಕರಣಾ ಭಾಗಗಳು ಕಾರ್ಯನಿರ್ವಹಿಸುತ್ತವೆಯಾದರೂ, ಭೌತಿಕ ಇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಸಕ್ರಿಯಗೊಳ್ಳುವುದಿಲ್ಲ.
ಉಪನಿಷತ್ತು ಮಾತನಾಡುವ ಪ್ರಜ್ಞೆಯ ಮೂರನೆಯ ಸ್ಥಿತಿಯೇ 'ಸುಷುಪ್ತಿ' ಅಥವಾ ಗಾಢ ನಿದ್ರೆ. ಉಪನಿಷತ್ತಿನ ಪ್ರಕಾರ, ಪ್ರಜ್ಞೆಯ ಈ ಸ್ಥಿತಿಯಲ್ಲಿ ಅದು ಬಾಹ್ಯಪ್ರಪಂಚದೊಡನೆ ಸ್ಪಂದಿಸುವುದಿಲ್ಲ, ಕನಸುಗಳನ್ನೂ ಕಾಣುವುದಿಲ್ಲ.
ಬಾಹ್ಯ ವಸ್ತುಗಳಿಂದಾಗಲಿ ಅಥವಾ ಮನಸ್ಸಿನಿಂದ ಸೃಷ್ಟಿಸಲ್ಪಟ್ಟ ವಸ್ತುಗಳಿಂದಾಗಲಿ ಯಾವುದೇ ಮಾಹಿತಿ ಬರದೇ ಇರುವುದರಿಂದ, ಅವುಗಳ ಸಂಸ್ಕರಣೆಯೂ ಇರುವುದಿಲ್ಲ. ಪ್ರಜ್ಞೆಯು ಬಾಹ್ಯ ಮತ್ತು ಆಂತರಿಕ ಪ್ರಪಂಚಗಳೆರಡರಿಂದಲೂ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ, ಈ ಸ್ಥಿತಿಯಲ್ಲಿ ಯಾವುದೇ ಬಯಕೆಗಳೂ ಇರುವುದಿಲ್ಲ ಎಂದು ಉಪನಿಷತ್ತು ಹೇಳುತ್ತದೆ.
ಪ್ರಜ್ಞೆಯು ಸ್ಥಬ್ದವಾಗಿರುವಂತೆ ತೋರುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಅದರರ್ಥ ಅದು ಶೂನ್ಯ ಸ್ಥಿತಿ ಎಂದಲ್ಲ. ಹಳೆಯ ಜ್ಞಾನವು ಇನ್ನೂ ಅಲ್ಲೇ ಇರುತ್ತದೆ. ಆದರೆ ಆ ಜ್ಞಾನವು ಹೆಪ್ಪುಗಟ್ಟಿದಂತೆ ಇರುತ್ತದೆ.
ಉಪನಿಷತ್ತು ಇನ್ನೂ ಒಂದು ವಿಸ್ಮಯದ ಕುರಿತು ಮಾತನಾಡುತ್ತದೆ. ಅದು ಹೇಳುತ್ತದೆ - ಪ್ರಜ್ಞೆಯ ಈ ಸ್ಥಿತಿಯು ಆನಂದಮಯವಾದದ್ದು. ಆದರೆ ಈ ಆನಂದವು ಯಾವುದೇ ಇಂದ್ರಿಯ ಸುಖದಿಂದ ಬರುವುದಿಲ್ಲ. ಬದಲಾಗಿ, ಪ್ರಜ್ಞೆಯ ಉಳಿದ ಎರಡು ಸ್ಥಿತಿಗಳಲ್ಲಿ ಕಂಡುಬರುವ ಮಾನಸಿಕ ಕ್ಲೇಶಗಳು ಈ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ಆನಂದವಿರುತ್ತದೆ. ಇದು ಆನಂದಕ್ಕೆ ಯಾವುದೇ ಅಡೆತಡೆಗಳು ಇಲ್ಲದಿರುವುದರಿಂದ ಉಂಟಾಗುವ ಆನಂದವಾಗಿದೆ.
ಉಪನಿಷತ್ತು, ಪ್ರಜ್ಞೆಯ ಈ ಸ್ಥಿತಿಯನ್ನು ಪ್ರಜ್ಞೆಯ ಇತರ ಎರಡು ಸ್ಥಿತಿಗಳ ನಡುವಿನ ಹೆಬ್ಬಾಗಿಲು ಎಂದೂ ಕರೆಯುತ್ತದೆ. ಈ ಸ್ಥಿತಿಯಿಂದಲೇ ಮನುಷ್ಯನು ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಹೋಗುತ್ತಾನೆ.
ಒಟ್ಟಿನಲ್ಲಿ ಉಪನಿಷತ್ತು ಈ ಸ್ಥಿತಿಯನ್ನು ಹೀಗೆ ವಿವರಿಸುತ್ತದೆ.
ನರವಿಜ್ಞಾನವೂ ಸಹ, ಗಾಢ ನಿದ್ರೆಯ ಸ್ಥಿತಿಯ ಬಗ್ಗೆ ಮಾತನಾಡುತ್ತದೆ, ಅಲ್ಲಿ ಮನುಷ್ಯನು ಬಾಹ್ಯ ಘಟನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಕನಸುಗಳನ್ನೂ ಕಾಣುವುದಿಲ್ಲ. ಇದಲ್ಲದೆ, ಒಬ್ಬರು ಮಲಗಿದ್ದಾಗ ನಿಯತಕಾಲಿಕವಾಗಿ (Periodically) ಈ ಸ್ಥಿತಿಯಿಂದಲೇ ಎಚ್ಚರದ ಸ್ಥಿತಿಗೆ ಅಥವಾ ಕನಸಿನ ಸ್ಥಿತಿಗೆ ಬದಲಾಗುತ್ತಾರೆ.
ಉಪನಿಷತ್ತುಗಳು ಪ್ರಜ್ಞೆಯ ಈ ಮೂರು ಸ್ಥಿತಿಗಳ ಬಗ್ಗೆ, ವಾಸ್ತವದ ಸಂಗತಿಯೆಂಬಂತೆ ಮಾತನಾಡುತ್ತವೆ. ಅವುಗಳ ವಿವರಣೆಯು ಅಷ್ಟೊಂದು ಆಳಕ್ಕೆ ಹೋಗದಿದ್ದರೂ, ನರವಿಜ್ಞಾನದ ವಿವರಣೆಗಳೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ.
ನರವಿಜ್ಞಾನವು ಈ ಎಲ್ಲಾ ಕಾರ್ಯಗಳ ಅಂತಿಮ ಫಲಾನುಭವಿ ಯಾರು ಎಂಬುದರ ಬಗ್ಗೆ ಮೌನವಾಗಿದೆ. ಅಥವಾ ಅದು ಈ ಬಗ್ಗೆ ಯಾವುದೇ ಖಚಿತ ನಿಲುವನ್ನು ತೆಗೆದುಕೊಳ್ಳುವುದಿಲ್ಲ.
ಮತ್ತೊಂದೆಡೆ, ಉಪನಿಷತ್ತು ಈ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಶಕ್ತಿ ಇದೆ ಮತ್ತು ಆ ಶಕ್ತಿಯೇ ಇದರ ಫಲಾನುಭವಿ ಎಂದು ದೃಢವಾಗಿ ನಂಬುತ್ತದೆ. ಆ ಶಕ್ತಿ ದೇಹವನ್ನು ಒಂದು ಉಪಕರಣವಾಗಿ ಬಳಸುತ್ತದೆ ಎಂದು ಅನ್ನುತ್ತದೆ. ಭಾರತೀಯ ಸಾಂಖ್ಯ ತತ್ತ್ವಜ್ಞಾನಿಗಳು ಹೇಳುವಂತೆ, ಫಲಾನುಭವಿಯೇ ಇಲ್ಲದಿದ್ದರೆ ಇಷ್ಟೆಲ್ಲ ಪ್ರಕ್ರಿಯೆಗಳೂ ಅರ್ಥಹೀನ.
ನಾವು ಹಿಂದಿನ ಸಂಚಿಕೆಗಳಲ್ಲಿ ಪ್ರಜ್ಞೆಯ ಬಗೆಗೆ ಡೇವಿಡ್ ಚಾಲ್ಮರ್ಸ್ ಅವರಂತಹ Cognitive philosophers ಗಳ ಅಭಿಪ್ರಾಯವನ್ನೂ ಚರ್ಚಿಸಿದ್ದೆವು.
ಚಾಲ್ಮರ್ಸ್ ಅವರಂತಹ ಜನರು ಮುಖ್ಯವಾಗಿ ಪ್ರಜ್ಞೆಯ ಮೊದಲನೆಯ ಸ್ಥಿತಿಯ ಮೇಲೆಯೇ ಗಮನ ಹರಿಸುತ್ತಾರೆ. ಅವರು ಇವೆಲ್ಲವುಗಳ ಹಿಂದಿರುವ ಯಾವುದೇ ಶಕ್ತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರೂ, ಈ ಪ್ರಜ್ಞೆಗೆ ಒಂದು ವ್ಯಕ್ತಿನಿಷ್ಠ (Subjective) ಮೌಲ್ಯವಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆ ವ್ಯಕ್ತಿನಿಷ್ಠ ಮೌಲ್ಯವನ್ನು ಮೆದುಳಿನ ಕಾರ್ಯವಿಧಾನದ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.
ಒಂದು ರೀತಿಯಲ್ಲಿ, ಅವರು ಇಷ್ಟವಿಲ್ಲದಿದ್ದರೂ ಈ ಪ್ರಜ್ಞೆಯ ಹಿಂದೆ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಿಗೆ ಮೀರಿದ, ಮೆದುಳು ಮತ್ತು ಅದರ ಕಾರ್ಯವಿಧಾನಗಳಿಗೆ ಮೀರಿದ ಯಾವುದೋ ಒಂದು ಶಕ್ತಿ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
ಆದರೆ ಉಪನಿಷತ್ತು ಮಾತನಾಡುವ ಪ್ರಜ್ಞೆಯ ನಾಲ್ಕನೇ ಸ್ಥಿತಿಯು ನರವಿಜ್ಞಾನಿಗಳು ಮತ್ತು Cognitive philosophers ಇಬ್ಬರನ್ನೂ ಬೆರಗುಗೊಳಿಸುವುದು. ಅದು ಅವರು ತಮ್ಮ ತಮ್ಮ ನಿಲುವುಗಳನ್ನು ಪುನರ್ಯೋಚಿಸುವಂತೆ ಮಾಡುವುದು.
ನಾವು ಆ ಸ್ಥಿತಿಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.

--------------------------------------------------------------------
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.
© Dr. King, Swami Satyapriya 2026

No comments:
Post a Comment