ನೀವು ಕೇಳುತ್ತಿರುವುದು, divine voice publications, ರವರಿಂದ ಪ್ರಕಾಶಿತ, "ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ", ಎಂಬ ಧ್ವನಿಪುಸ್ತಕ. ಇದು, "ಸಮಗ್ರ ಯೋಗವಿಜ್ಞಾನ", ಎಂಬ ಸರಣಿಯ ಮೊದಲನೆಯ ಭಾಗ. ಮೂಲ ಆಂಗ್ಲ ಪುಸ್ತಕ, "The ultimate book on Yoga : All that you want to know about Yoga". ಲೇಖಕರು - ಡಾಕ್ಟರ್ ಕಿಂಗ್ ಮತ್ತು ಸ್ವಾಮೀ ಸತ್ಯಪ್ರಿಯ.
ಯೋಗ: ಕೇವಲ ದೈಹಿಕ ವ್ಯಾಯಾಮವೇ ಅಥವಾ ಅದಕ್ಕೂ ಮೀರಿದ ವಿಜ್ಞಾನವೇ?

ಇಂದಿನ ವೇಗದ ಬದುಕಿನಲ್ಲಿ ನೆಮ್ಮದಿ ಎಂಬುದು ಮರೀಚಿಕೆಯಾಗುತ್ತಿದೆ. ಆದರೆ ಉತ್ತರ ನಮ್ಮಲ್ಲೇ ಇದೆ. ಈ ಪುಸ್ತಕಸರಣಿಯು ಪ್ರಾಚೀನ ಯೋಗ ಪರಂಪರೆ ಮತ್ತು ಆಧುನಿಕ ಮೆದುಳಿನ ವಿಜ್ಞಾನದ ನಡುವಿನ ಅದ್ಭುತ ಕೊಂಡಿಯನ್ನು ಪರಿಚಯಿಸುತ್ತದೆ.
ಯೋಗಾಸನಗಳು ಕೇವಲ ದೇಹವನ್ನಷ್ಟೇ ಅಲ್ಲ, ನಮ್ಮ ಮೆದುಳಿನ ಕಾರ್ಯವೈಖರಿಯನ್ನು ಹೇಗೆ ಬದಲಿಸಬಲ್ಲವು? ಧ್ಯಾನದ ಮೂಲಕ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ಆನಂದದ ಅನ್ವೇಷಣೆ ಮಾಡುವುದು ಹೇಗೆ? ೩೦೦೦ ವರ್ಷಗಳ ಇತಿಹಾಸವಿರುವ ಯೋಗಪಥವನ್ನು ಇಂದಿನ ವಿಜ್ಞಾನದ ಒರೆಗಲ್ಲಿಗೆ ಹಚ್ಚಿ, ಸರಳವಾಗಿ ವಿವರಿಸುವ ಪ್ರಯತ್ನವೇ ಈ 'ಸಮಗ್ರ ಯೋಗವಿಜ್ಞಾನ' ಎಂಬ ಪುಸ್ತಕ ಸರಣಿ.
ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮತ್ತು ಮನಸ್ಸಿನ ರಹಸ್ಯಗಳನ್ನು ಭೇದಿಸಲು ಇದೊಂದು ಸಮಗ್ರ ಕೈಪಿಡಿ.
ಈ ಪುಸ್ತಕಸರಣಿಯ ಪ್ರಮುಖ ಆಕರ್ಷಣೆಗಳು:
ಈ ಸರಣಿಯಲ್ಲಿ ಒಟ್ಟು ಒಂಬತ್ತು ಪುಸ್ತಕಗಳಿವೆ. ಅವೆಂದರೆ :
ಭಾಗ 1. ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ.: ಪ್ರಸ್ತುತ ಪುಸ್ತಕ.
ಭಾಗ 2. ಯೋಗವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಮೆದುಳಿನ ವಿಜ್ಞಾನ.
ಭಾಗ 3. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಹೇಗೆ?
ಭಾಗ 4. ಯೋಗಾಸನಗಳು ಆರೋಗ್ಯವನ್ನು ಹೇಗೆ ಸುಧಾರಿಸುತ್ತವೆ?
ಭಾಗ 5. ಏಕಾಗ್ರತೆಯನ್ನು ಚುರುಕುಗೊಳಿಸುವುದು ಹೇಗೆ?
ಭಾಗ 6. ಧ್ಯಾನ ಮಾಡುವುದು ಹೇಗೆ?
ಭಾಗ 7. ಧ್ಯಾನ ಮಾಡಿದಾಗ ಏನಾಗುತ್ತದೆ?
ಭಾಗ 8. ನಮ್ಮ ಮೆದುಳನ್ನು ಮೀರಿದ ಮನಸ್ಸೊಂದಿದೆಯೇ?
ಭಾಗ 9. ಯೋಗದ ಅಂತಿಮ ಗುರಿ ಏನು?
ಬನ್ನಿ, ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ.
ಇಂದಿನ ದಿನಗಳಲ್ಲಿ ಯೋಗ ಎಂದರೆ ಏನು ಎಂದು ಗೊತ್ತಿಲ್ಲದವರೇ ವಿರಳ. ಯೋಗ ಬಹಳ ಪ್ರಯೋಜನಕಾರಿ ಎಂಬುದನ್ನು ಬಹುತೇಕ ಎಲ್ಲರೂ ಸಹಜವಾಗಿಯೇ ಒಪ್ಪುತ್ತಾರೆ. ಅನೇಕ ಯೋಗ ಗುರುಗಳು ಯೋಗದ ಬಗ್ಗೆ ಪುಸ್ತಕಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಕೆಲವು ಬಹಳ ಜನಪ್ರಿಯವೂ ಆಗಿವೆ.
ಆದರೆ ಸ್ವಲ್ಪ ನಿಕಟವಾಗಿ ನೋಡಿದರೆ, ಈ ಪುಸ್ತಕಗಳಲ್ಲಿ ಬಹುತೇಕವು ಆ ಗುರುಗಳು ಪ್ರಚಾರ ಮಾಡುತ್ತಿರುವ ನಿರ್ದಿಷ್ಟ 'ಯೋಗ ರೂಪಗಳ' ಬಗ್ಗೆ ಮಾತ್ರವೇ ಮಾತನಾಡುತ್ತವೆ. ಜೊತೆಗೆ, ಈ ಪುಸ್ತಕಗಳ ಬಹುಪಾಲು, ಯೋಗವನ್ನು ಆಜ್ಞಾಪನಾತ್ಮಕ ದೃಷ್ಟಿಕೋನದಿಂದ ವಿವರಿಸುತ್ತವೆ. ಯೋಗವನ್ನು ಧರ್ಮ ಅಥವಾ ಇತರೆ ನಂಬಿಕೆ-ಆಧಾರಿತ ಪದ್ಧತಿಗಳಂತೆ ಒಂದು ನಂಬಿಕೆ-ವ್ಯವಸ್ಥೆಯಾಗಿ ಚಿತ್ರಿಸಲಾಗುತ್ತದೆ.
ಉದಾಹರಣೆಗೆ, ಈ ಪುಸ್ತಕಗಳು, ಆಸನಗಳು ಅಥವಾ ಉಸಿರಾಟದ ಅಭ್ಯಾಸಗಳ ಬಗ್ಗೆ ಮಾತನಾಡುವಾಗ, ಅವುಗಳ ಆರೋಗ್ಯ ಲಾಭಗಳನ್ನು ಖಂಡಿತವಾಗಿ ಹೇಳುತ್ತವೆ. ಆದರೆ ಆ ಅಭ್ಯಾಸಗಳು ಹೇಳುವ ಫಲಿತಾಂಶಗಳನ್ನು ಹೇಗೆ ಸಾಧಿಸುತ್ತವೆ ಎಂಬುದನ್ನು ತಾರ್ಕಿಕವಾಗಿ ವಿವರಿಸುವುದು ಅಪರೂಪ. ತಮ್ಮ ಹೇಳಿಕೆಗಳಿಗೆ ಬೆಂಬಲವಾಗಿ ಪ್ರಾಯೋಗಿಕ ಸಾಕ್ಷ್ಯವನ್ನೂ ಬಹಳ ಕಡಿಮೆ ನೀಡಲಾಗುತ್ತದೆ.
ಕೆಲವು ಗುರುಗಳು ಪರಸ್ಪರ ವಿರೋಧವಾಗಿರುವ ಅನೇಕ ಕಲ್ಪನೆಗಳು ಮತ್ತು ದೃಷ್ಟಿಕೋನಗಳನ್ನು ವಿವರಗಳಿಲ್ಲದೆ ಒಟ್ಟಿಗೆ ಎಸೆಯುತ್ತಾ, ಓದುಗರನ್ನು ಅತಿಶಯೋಕ್ತಿಯಿಂದ ಮುಳುಗಿಸುತ್ತಾರೆ. ಅವರು ಬ್ರಹ್ಮಾಂಡ ಶಕ್ತಿ, ಅತಿಚೇತನ, ಅತೀಂದ್ರಿಯ ಜಾಗೃತಿ ಇತ್ಯಾದಿ ಪದಗಳನ್ನು ಬಳಸುತ್ತಾರೆ. ಆದರೆ ಅವುಗಳ ನಿಜವಾದ ಅರ್ಥವೇನು ಎಂಬುದು ಅಪರೂಪವಾಗಿ ವಿವರಿಸಲಾಗುತ್ತದೆ ಅಥವಾ ವ್ಯಾಖ್ಯಾನಿಸಲಾಗುತ್ತದೆ.
ಆಧುನಿಕ ವೈದ್ಯಕೀಯ ಪದಪ್ರಯೋಗಗಳು ಅಥವಾ ಕ್ವಾಂಟಮ್ ಭೌತಶಾಸ್ತ್ರದ ಸಿದ್ಧಾಂತಗಳಿಗೆ ಸಂಬಂಧಿಸಿದ ಅಸ್ಪಷ್ಟ ಉಪಮಾನಗಳನ್ನು ಬಳಸಿ, ಈ ಗುರುಗಳು ತಮ್ಮ ರಹಸ್ಯಮಯ ಸಿದ್ಧಾಂತಗಳಿಗೆ ವೈಜ್ಞಾನಿಕ ಮುಖವಾಡ ಹಾಕಲು ಪ್ರಯತ್ನಿಸುತ್ತಾರೆ.
ಯೋಗದ ಈ ರೀತಿಯ ವಿವರಣೆಯಿಂದ ಎರಡು ಪ್ರಮುಖ ಸಮಸ್ಯೆಗಳಾಗುತ್ತವೆ. ಮೊದಲನೆಯದು, ಯೋಗದ ಹಿಂದಿರುವ ಮೂಲ ಕಾರ್ಯವಿಧಾನಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳದೇ ಇದ್ದರೆ, ಅದರ ಸಂಪೂರ್ಣ ಉಪಯೋಗವನ್ನು ಪಡೆಯುವುದು ಕಷ್ಟ. ಎರಡನೆಯದು, ಸರಿಯಾಗಿ ತಿಳಿದುಕೊಳ್ಳದ ವ್ಯವಸ್ಥೆ ಕಾಲಕ್ರಮೇಣ ವಿಕೃತಗೊಳ್ಳುತ್ತದೆ ಮತ್ತು ತನ್ನ ಮಹತ್ವ ಕಳೆದುಕೊಳ್ಳುತ್ತದೆ.
ನಮಗೆ ಬೇಕಿರುವುದು ಸ್ಪಷ್ಟವಾಗಿ ವ್ಯಾಖ್ಯಾನಗೊಂಡ, ದೃಢವಾದ ತತ್ವಗಳಿರುವ ಯೋಗ ಪದ್ಧತಿ. ಸಾಧ್ಯವಾದ-ಮಟ್ಟಿಗೆ ನಿಷ್ಪಕ್ಷಪಾತವಾಗಿ ಪರೀಕ್ಷೆಗೆ ಒಳಪಡಿಸಬಹುದಾದ ವ್ಯವಸ್ಥೆ. ನಂಬಬಹುದಾದ, ನಿರೀಕ್ಷಿಸಬಹುದಾದ ಫಲಿತಾಂಶಗಳನ್ನು ನೀಡುವ ವ್ಯವಸ್ಥೆ.
ನಾವು ಇಂದಿನ ದಿನಗಳಲ್ಲಿ ನೋಡುತ್ತಿರುವ ಯೋಗ ಈ ಮಾನದಂಡಗಳನ್ನು ಪೂರೈಸುತ್ತದೆಯೇ?
ಬಹುತೇಕ ಜನರಿಗೆ ಯೋಗ ಎಂದರೆ ದೇಹಕೇಂದ್ರಿತ ಅಭ್ಯಾಸ, ಕೆಲವು ಆಸನಗಳು ಅಥವಾ ಉಸಿರಾಟ ಕ್ರಿಯೆಗಳು ಎಂಬಂತಿದೆ. ಇಂಥವರ ಉದ್ದೇಶ ಸಾಮಾನ್ಯವಾಗಿ ದೇಹಾರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳುವುದು.
ಆರೋಗ್ಯ ಮತ್ತು ದೈಹಿಕ ಕ್ಷಮತೆ ಖಂಡಿತವಾಗಿಯೂ ಮಹತ್ವದವು. ಆದರೆ ಯೋಗ ಅಷ್ಟಕ್ಕೇ ಸೀಮಿತವಲ್ಲ.
ಯೋಗವು ಸಾಮಾನ್ಯ ಆರೋಗ್ಯ ವೃದ್ಧಿಯಿಂದ ಆರಂಭಿಸಿ, ಒತ್ತಡ ಕಡಿತ, ಮನಸ್ಸಿನ ಏಕಾಗ್ರತೆ-ವೃದ್ಧಿ, ಮಾನಸಿಕ ಸಾಮರ್ಥ್ಯ ವಿಕಾಸ, ವಿವರಿಸಲಾಗದ ಆನಂದದ ಅನುಭವ, ಪರಮ ಸಾಕ್ಷಾತ್ಕಾರ, ಮತ್ತು ಕೊನೆಗೆ ಹೆಚ್ಚು ಶಾಂತ ಮತ್ತು ವಾಸಿಸಲು-ಯೋಗ್ಯವಾದ ಲೋಕವನ್ನು ನಿರ್ಮಿಸುವವರೆಗೂ ವ್ಯಾಪಕವಾದ ಉಪಯೋಗವನ್ನು ಹೊಂದಿದೆ.
ಆದರೆ ಇವುಗಳಲ್ಲಿ ಕೆಲವು ಯೋಗದ ನಿಜವಾದ ಗುರಿಗಳಲ್ಲ. ಯೋಗವನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡಿದಾಗ ಸ್ವಾಭಾವಿಕವಾಗಿ ದೊರಕುವ ಉಪಫಲಗಳಷ್ಟೇ. ಇದನ್ನು ನಾವು ಮುಂದೆ ನೋಡುತ್ತೇವೆ.
ಯೋಗಕ್ಕೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸವಿದೆ. ಕಾಲಕ್ರಮೇಣ ಯೋಗವು ಅನೇಕ ಬದಲಾವಣೆಗಳನ್ನು ಕಂಡು, ಹಲವಾರು ಹೊಸ ರೂಪಗಳನ್ನು ಪಡೆದಿದೆ. ಇಂದಿನ ದಿನಗಳಲ್ಲಿ ಯೋಗವೆಂದು ಪ್ರದರ್ಶಿಸಲಾಗುತ್ತಿರುವುದು ವಿರಾಟ್-ಯೋಗದ ಸಂಕ್ಷಿಪ್ತ ರೂಪವಷ್ಟೇ.
ಹಾಗಾದರೆ ನಿಜವಾದ ಯೋಗ ಎಂದರೆ ಏನು?
ಯೋಗದ ಮೂಲಪ್ರವರ್ತಕನಾಗಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಪತಂಜಲಿ, ಯೋಗವನ್ನು ಹೀಗೆ ವ್ಯಾಖ್ಯಾನಿಸುತ್ತಾನೆ:
ಅಂದರೆ, ಯೋಗವು ಮನಸ್ಸನ್ನು ಸಂಪೂರ್ಣ ಶಾಂತ ಸ್ಥಿತಿಗೆ ತರುವುದರ ಬಗ್ಗೆ. ಆದರೆ ಶಾಂತ-ಮನಸ್ಸು ಹೊಂದಿರುವುದೇ ಯೋಗದ ಅಂತಿಮ ಗುರಿ ಎನ್ನುವುದಲ್ಲ. ಮನಸ್ಸನ್ನು ಶಾಂತಗೊಳಿಸುವುದು ಕೇವಲ ಒಂದು ವಿಧಾನ, ಮನಸ್ಸನ್ನು-ಮೀರಿದ ಯಾವುದೋ ಸ್ಥಿತಿಯನ್ನು ತಲುಪಲು ಉಪಾಯ. ಅದು ಏನು ಎಂಬುದನ್ನು ನಾವು ಮುಂದೆ ನೋಡುತ್ತೇವೆ.
ಪತಂಜಲಿಯ ಯೋಗ ಸೂತ್ರದ ಈ ಎರಡನೇ ಸೂತ್ರದಲ್ಲಿಯೇ ಸ್ಪಷ್ಟವಾಗುವಂತೆ, ಯೋಗವು ಮುಖ್ಯವಾಗಿ ಮನಸ್ಸಿನ ಮೇಲೆ ಕೇಂದ್ರೀಕೃತವಾದ ಪದ್ಧತಿ. ಇಂದಿನ ದಿನಗಳಲ್ಲಿ ಯೋಗವೆಂದು ನಾವು ನೋಡುವ ಅನೇಕ ಅಂಶಗಳು ಇದರಲ್ಲಿ ಬಹಳ-ಕಡಿಮೆ ಪ್ರಮಾಣದಲ್ಲಿವೆ.
ಪತಂಜಲಿ ಪ್ರಚಾರ ಮಾಡಿದ ಈ ಮೂಲ ಯೋಗದೊಳಗೆ ಸ್ವಲ್ಪ ಇನ್ನಷ್ಟು ಪ್ರವೇಶಿಸೋಣ.
ಪತಂಜಲಿಯ ಯೋಗವನ್ನು ಅವನ ಯೋಗ ಸೂತ್ರ ಎಂಬ ಕೃತಿಯಲ್ಲಿ ವಿವರಿಸಲಾಗಿದೆ. ಇದು ಒಟ್ಟು 195 ಸೂತ್ರಗಳ ಸಂಗ್ರಹ. ಸೂತ್ರ ಎಂದರೆ, ಅಲ್ಪ-ಪದಗಳಲ್ಲಿ ಗಹನ ಅರ್ಥವನ್ನು ಹೊತ್ತ ಸಂಕ್ಷಿಪ್ತ ಅಭಿವ್ಯಕ್ತಿ.
ಈ ಸೂತ್ರಗಳು ನಾಲ್ಕು ಅಧ್ಯಾಯಗಳಲ್ಲಿ ಹಂಚಿಕೆಯಾಗಿವೆ. ಅವುಗಳೆಂದರೆ ಸಮಾಧಿ ಪಾದ, ಸಾಧನ ಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ.
ಈ ಅಧ್ಯಾಯಗಳ ನಡುವಿನ ವಿಭಾಗಗಳು ಬಹಳ ಸ್ಪಷ್ಟವಾಗಿಲ್ಲ. ವಿಷಯಗಳು ಹಲವಾರು ಬಾರಿ, ಅಧ್ಯಾಯಗಳ ಮಿತಿಯನ್ನು ದಾಟಿ ಹರಿಯುತ್ತವೆ. ಮೂಲತಃ ಒಂದೇ ನಿರಂತರ ಗ್ರಂಥವಾಗಿದ್ದುದನ್ನು ನಂತರ ಯಾರೋ ವಿಭಜಿಸಿದಂತಿದೆ.
ಮೊದಲ ಎರಡು ಅಧ್ಯಾಯಗಳಲ್ಲಿ ಯೋಗ ಸೂತ್ರದ ಕೇಂದ್ರ ಅಂಶಗಳು ಸೇರಿವೆ. ಅವು ಮೂಲ ತತ್ವಗಳು ಮತ್ತು ವಿಧಾನಗಳ ಬಗ್ಗೆ ಮಾತನಾಡುತ್ತವೆ. ಉಳಿದ ಅಧ್ಯಾಯಗಳು ನಂತರದ ಸೇರ್ಪಡೆಗಳಂತೆ ಕಾಣುವ ಕಾರಣ, ನಾನು ಸಾಮಾನ್ಯವಾಗಿ, ಈ ಮೊದಲ ಎರಡು ಅಧ್ಯಾಯಗಳ ಮೇಲೆಯೇ ಗಮನ ಕೇಂದ್ರೀಕರಿಸುತ್ತೇನೆ.
ಬಹುತೇಕ ಜನರ ಅಭಿಪ್ರಾಯದಂತೆ ಪತಂಜಲಿಯ ಯೋಗವು ಕ್ರಿಸ್ತ ಪೂರ್ವ 200ರ ಸಮಯದಲ್ಲಿ ಪ್ರಚಾರಕ್ಕೆ ಬಂದಿತು. ಕೆಲವರು ಇದನ್ನು ನಂತರದ ಕಾಲವಾದ ಕ್ರಿಸ್ತ ಶಕ 400 ರಿಂದ 600ರ ಅವಧಿಗೆ ಸೇರಿಸುತ್ತಾರೆ. ಆದರೆ ನಾನು ಮುಂದೆ-ವಿವರಿಸುವ ಕಾರಣಗಳ ಆಧಾರವಾಗಿ, ಪತಂಜಲಿ ಕ್ರಿಸ್ತ ಪೂರ್ವ 200 ಅಥವಾ ಅದಕ್ಕೂ ಮುಂಚಿನ ಕಾಲದವನು ಎಂಬ ಅಭಿಪ್ರಾಯವನ್ನು ಹೊಂದಿದ್ದೇನೆ.
ಈ ದಿನಾಂಕಗಳ ಬಗ್ಗೆ ನಾನು ಹೆಚ್ಚು ಹಠ-ಹಿಡಿಯುವುದಿಲ್ಲ. ಆದರೆ ಕೆಲವೊಮ್ಮೆ ಕಾಲಗಣನೆ ಕಲ್ಪನೆಗಳು ಹೇಗೆ ಒಂದೊಂದು ಹಂತದಿಂದ ಮತ್ತೊಂದು ಹಂತಕ್ಕೆ ಹರಿದುಬಂದವು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಂದಿನ ಯೋಗ, ಹೇಗೆ ಇಂದಿನ ರೂಪವನ್ನು ಪಡೆದಿತು, ಅದಕ್ಕೆ ಯಾವ ಅಂಶಗಳು ಕಾರಣವಾದವು ಎಂಬುದನ್ನು ತಿಳಿದುಕೊಳ್ಳಲು ಇದು ಉಪಯುಕ್ತ.
ಪತಂಜಲಿಯ ಯೋಗದ ಮುಖ್ಯ ವಿಷಯ ಮನಸ್ಸನ್ನು ಕ್ರಮೇಣ ಸಂಪೂರ್ಣ ಶಾಂತ ಸ್ಥಿತಿಗೆ ತಲುಪಿಸುವುದು. ಅದರ ಉದ್ದೇಶ ನಮ್ಮ ವೈಯಕ್ತಿಕ ಅಸ್ತಿತ್ವದ ಪರಮ ಸತ್ಯವನ್ನು ಅರಿಯುವುದು.
ಆ ಗುರಿಯನ್ನು ತಲುಪುವ ಮಾರ್ಗವಾಗಿ ಧ್ಯಾನವನ್ನು ಸೂಚಿಸಲಾಗಿದೆ. ಈ ಯೋಗದಲ್ಲಿ ದೇಹಾಸನಗಳು ಮತ್ತು ಉಸಿರಾಟ ಅಭ್ಯಾಸಗಳ ಬಗ್ಗೆ ಸ್ವಲ್ಪಮಟ್ಟಿಗೆ ಮಾತ್ರ ಉಲ್ಲೇಖವಿದೆ. ಅವುಗಳನ್ನು ಧ್ಯಾನಕ್ಕೆ ಪೂರ್ವಸಿದ್ಧತೆಯಾಗಿ ಮಾತ್ರ ನೋಡಲಾಗಿದೆ. ಆರೋಗ್ಯ-ವೃದ್ಧಿ ಎಂದಿಗೂ ಗುರಿಯಾಗಿರಲಿಲ್ಲ.
ಪತಂಜಲಿಯ ಯೋಗದಲ್ಲಿ ಎಂಟು ಹಂತಗಳಿವೆ. ಇದನ್ನು ಅಷ್ಟಾಂಗ-ಯೋಗ ಎಂದು ಕರೆಯಲಾಗುತ್ತದೆ. ಸಂಕ್ಷಿಪ್ತವಾಗಿ, ಈ ಹಂತಗಳು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.
ಪತಂಜಲಿಯ ಯೋಗ ವ್ಯಾಖ್ಯಾನ ಮತ್ತು ಅವನ ಧ್ಯಾನಕ್ಕೆ ನೀಡಿದ ಮಹತ್ವವನ್ನು ಗಮನಿಸಿದರೆ, ಈ ಯೋಗದ ಮೂಲ, ಪತಂಜಲಿಗಿಂತಲೂ ಬಹಳ ಹಿಂದಿನ ಕಾಲಕ್ಕೆ ಸೇರಿದೆ ಎಂದು ಕಾಣುತ್ತದೆ. ಬಹುಶಃ ಕ್ರಿಸ್ತ ಪೂರ್ವ 200ರಕ್ಕೂ ಸಾವಿರಾರು ವರ್ಷಗಳ ಮುಂಚೆಯೇ.
ಪತಂಜಲಿಗೆ ಸುಮಾರು ನಾಲ್ಕು ಶತಮಾನಗಳ ಮುಂಚೆಯೇ ಇದ್ದ ಬೌದ್ಧ ಧರ್ಮದಲ್ಲಿಯೂ ಪತಂಜಲಿಯ ಯೋಗಕ್ಕೆ ಹೋಲುವ ಧ್ಯಾನ ಪದ್ಧತಿಗಳು ಇದ್ದವು. ಧ್ಯಾನಕ್ಕೆ ಮೊದಲು, ಯಮ, ನಿಯಮ, ಪ್ರಾಣಾಯಾಮದಂತಹ ಪೂರ್ವಸಿದ್ಧತೆಯ ಹಂತಗಳೂ ಅಲ್ಲಿತ್ತು.
ಆ ಕಾರಣದಿಂದ, ನಾನು ಆ ಅಭ್ಯಾಸಗಳನ್ನೂ ಯೋಗವೆಂದೇ ಕರೆಯುತ್ತೇನೆ. ಪತಂಜಲಿ, ಈ ಬೌದ್ಧ ಪದ್ಧತಿಗಳು ಮತ್ತು ಕಲ್ಪನೆಗಳಿಂದ ಪ್ರಭಾವಿತನಾಗಿರಬಹುದು ಎಂದು ನಾನು ಅನುಮಾನಿಸುತ್ತೇನೆ. ಅಥವಾ ಇವೆರಡಕ್ಕೂ ಒಂದೇ ಸಾಮಾನ್ಯ ಮೂಲ ಇರುವ ಸಾಧ್ಯತೆಯೂ ಇದೆ.
ಬೌದ್ಧ ಧರ್ಮವು ಇತರ ಎಲ್ಲಾ ಪ್ರಾಚೀನ ಭಾರತೀಯ ದರ್ಶನಗಳಂತೆಯೇ ಬಹುತೇಕ ಒಂದೇ-ರೀತಿಯ ನಂಬಿಕೆಗಳನ್ನು ಹೊಂದಿದ್ದರೂ, ಅದು ಸಂಪೂರ್ಣವಾಗಿ ನಾಸ್ತಿಕ ತತ್ವಶಾಸ್ತ್ರವಾಗಿತ್ತು. ಬೌದ್ಧ ಧರ್ಮಕ್ಕೆ ದೇವರಲ್ಲಿಯೂ ಆತ್ಮದಲ್ಲಿಯೂ ನಂಬಿಕೆ ಇರಲಿಲ್ಲ.
ಇದರ ವಿರುದ್ಧವಾಗಿ, ಪತಂಜಲಿಯ ಪದ್ಧತಿ ಆತ್ಮಕೇಂದ್ರಿತವಾಗಿತ್ತು. ಇದನ್ನು ಹೊರತುಪಡಿಸಿದರೆ, ಈ ಎರಡು ಪದ್ಧತಿಗಳು — ಪತಂಜಲಿಯದು ಮತ್ತು ಬೌದ್ಧರದು — ಬಹುತೇಕ ಒಂದೇ ರೀತಿಯ ಪೂರ್ವಸಿದ್ಧತೆಯ ಹಂತಗಳು, ಒಂದೇ ರೀತಿಯ ಧ್ಯಾನ ವಿಧಾನಗಳು ಮತ್ತು ಒಂದೇ ರೀತಿಯ ಗುರಿಗಳನ್ನು ಹೊಂದಿದ್ದವು. ಇವನ್ನು ನಾವು ಮುಂದೆ ಇನ್ನಷ್ಟು ವಿವರವಾಗಿ ನೋಡುತ್ತೇವೆ.
ಯೋಗ ಅಥವಾ ಧ್ಯಾನ ಪದ್ಧತಿಗಳು ಬುದ್ಧನಿಂದಲೇ ಆರಂಭವಾದವು ಎನ್ನುವುದೂ ಸರಿಯಲ್ಲ. ಬುದ್ಧನಿಗಿಂತಲೂ ಮುಂಚೆಯೇ ಧ್ಯಾನ ತಂತ್ರಗಳು ಅಸ್ತಿತ್ವದಲ್ಲಿದ್ದವು. ಬುದ್ಧನು ಅವುಗಳನ್ನು ಕ್ರಮಬದ್ಧಗೊಳಿಸಿ ಹೆಚ್ಚು ಪ್ರಾಯೋಗಿಕವಾಗಿ ರೂಪಿಸಿದ್ದಿರಬಹುದು.
ಉದಾಹರಣೆಗೆ, ಭಗವದ್ಗೀತೆಯಲ್ಲಿ ಅನೇಕ ರೀತಿಯ ಯೋಗಗಳ ಬಗ್ಗೆ ಉಲ್ಲೇಖವಿದೆ. ಅಲ್ಲಿ, 'ಯೋಗ' ಎಂಬ ಪದವನ್ನು ಬಹಳ ವಿಶಾಲ ಅರ್ಥದಲ್ಲಿ ಬಳಸಲಾಗಿದೆ.
ವಿಶೇಷವಾಗಿ ಜ್ಞಾನ-ಯೋಗ, ಕರ್ಮ-ಯೋಗ, ಧ್ಯಾನ-ಯೋಗ ಮತ್ತು ಭಕ್ತಿ-ಯೋಗಗಳ ಬಗ್ಗೆ ಅದು ಮಾತನಾಡುತ್ತದೆ.
ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಈ ಪುಸ್ತಕವನ್ನು ಸಂಪೂರ್ಣ ಉಚಿತವಾಗಿ ಕೇಳಬಹುದು.

- ವೈಜ್ಞಾನಿಕ ದೃಷ್ಟಿಕೋನ: ಯೋಗ ಮತ್ತು ಮೆದುಳಿನ ಸಂಬಂಧದ ವಿಶ್ಲೇಷಣೆ.
- ಪ್ರಾಯೋಗಿಕ ಹಂತಗಳು: ಧ್ಯಾನ ಮತ್ತು ಏಕಾಗ್ರತೆ ವೃದ್ಧಿಸುವ ಸುಲಭ ಮಾರ್ಗಗಳು.
- ಐತಿಹಾಸಿಕ ಹಿನ್ನೆಲೆ: ಯೋಗ ಬೆಳೆದು ಬಂದ ೩೦೦೦ ವರ್ಷಗಳ ಪಯಣ.

"ಯೋಗಃ ಚಿತ್ತ ವೃತ್ತಿ ನಿರೋಧ".
ಯೋಗ ಎಂದರೆ ಮನಸ್ಸಿನ ಕ್ರಿಯೆಗಳನ್ನು ನಿಯಂತ್ರಿಸುವುದು.
– ಯೋಗ ಸೂತ್ರ 1.2.

--------------------------------------------------------------------
ಉಚಿತವಾಗಿ ಕೇಳಲು https://t.me/+mEm8CZRW_oUzNTE9 ಲಿಂಕ್ ಅನ್ನು ಕ್ಲಿಕ್ ಮಾಡಿ (ಕೇವಲ ಸೀಮಿತ ಅವಕಾಶಗಳು ಮಾತ್ರ ಲಭ್ಯವಿವೆ, ಆದ್ದರಿಂದ ಶೀಘ್ರವಾಗಿ ಮಾಡಿ).
ಒಂದು ವೇಳೆ ನೀವು ಅದನ್ನು ತಪ್ಪಿಸಿಕೊಂಡರೆ, https://tinyurl.com/mylibrary1234 ಮೂಲಕ ಪುಸ್ತಕವನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಬಹುದು.
ಒಂದು ವೇಳೆ ನೀವು ಅದನ್ನು ತಪ್ಪಿಸಿಕೊಂಡರೆ, https://tinyurl.com/mylibrary1234 ಮೂಲಕ ಪುಸ್ತಕವನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಬಹುದು.
--------------------------------------------------------------------
If
this resonated with you, I invite you to join my weekly readership. I
publish a new deep-dive every Saturday, moving beyond the surface to
look at the questions that truly matter. No paywalls, no "bait"—just a
direct share from my mind to yours. Click to subscribe.
Si esto resonó contigo, te invito a unirte a mis lectores semanales. Publico un análisis en profundidad cada sábado, yendo más allá de la superficie para abordar las preguntas que realmente importan. Sin muros de pago, sin «cebos»: simplemente un intercambio directo, de mi mente a la tuya. Haz clic para suscribirte.
Falls dies bei Ihnen Anklang gefunden hat, lade ich Sie herzlich ein, sich meinen wöchentlichen Lesern anzuschließen. Jeden Samstag veröffentliche ich eine tiefgehende Analyse, die über die Oberfläche hinausgeht und jene Fragen behandelt, die wirklich zählen. Keine Paywalls, kein Clickbait – lediglich ein direkter Austausch: von meinem Kopf in Ihren. Klicken Sie hier, um sich anzumelden.
अगर यह बात आपके दिल को छू गई, तो मैं आपको अपने साप्ताहिक पाठकों के समूह में शामिल होने के लिए सादर आमंत्रित करता हूँ। हर शनिवार को, मैं एक गहन विश्लेषण प्रकाशित करता हूँ जो केवल ऊपरी बातों तक सीमित नहीं रहता, बल्कि उन सवालों पर रोशनी डालता है जो वास्तव में मायने रखते हैं। कोई Paywall नहीं, कोई Clickbait नहीं—बस एक सीधा संवाद: मेरे विचारों से सीधे आपके विचारों तक। सब्सक्राइब करने के लिए यहाँ क्लिक करें।
ఇది మీకు నచ్చినట్లయితే, నా వారపు పాఠకులలో చేరమని మిమ్మల్ని సాదరంగా ఆహ్వానిస్తున్నాను. ప్రతి శనివారం, నేను ఉపరితలానికి అతీతంగా, నిజంగా ముఖ్యమైన ప్రశ్నలను పరిష్కరించే ఒక లోతైన విశ్లేషణను ప్రచురిస్తాను. ఎలాంటి పేవాల్స్ లేవు, క్లిక్బైట్ లేదు—కేవలం ఒక ప్రత్యక్ష భావప్రసారం: నా మనసు నుండి మీ మనసుకు. సబ్స్క్రయిబ్ చేసుకోవడానికి ఇక్కడ క్లిక్ చేయండి.
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.

© Dr. King, Swami Satyapriya 2026

No comments:
Post a Comment