ನಾನು ಚಿಕ್ಕ ಬಾಲಕನಾಗಿದ್ದಾಗ ನಿಯಮಿತವಾಗಿ ಒಂದು ಅಭ್ಯಾಸವನ್ನು ಮಾಡುತ್ತಿದ್ದೆ, ಅದು ನಿಖರವಾಗಿ ಏನೆಂದು ತಿಳಿಯದೆಯೇ. ಆ ಅಭ್ಯಾಸದಿಂದ ಸಿಕ್ಕ ಅಂತಿಮ ಅನುಭವವು ನನ್ನನ್ನು ಅದರತ್ತ ಸೆಳೆಯಿತು ಮತ್ತು ನಾನು ಅದನ್ನು ದೀರ್ಘಕಾಲದವರೆಗೆ ಮಾಡುತ್ತಲೇ ಹೋದೆ.
ನಾನು ಬೆಳೆದು, ಹಲವು ವಿಷಯಗಳಿಗೆ ಒಡ್ಡಿಕೊಂಡ ನಂತರವೇ ನನಗೆ ಅರ್ಥವಾಗಿದ್ದು—ನಾನು ಮಾಡುತ್ತಿದ್ದದ್ದು ಧ್ಯಾನದ ಒಂದು ರೂಪ ಮತ್ತು ನನ್ನನ್ನು ಸೆಳೆದಿದ್ದ ಆ ಅನುಭವವೇ 'ಸಮಾಧಿ' ಎಂದು.

ನೀವು ಯಾವುದೋ ಪುಸ್ತಕವನ್ನು ಓದಿ ಅಥವಾ ಧ್ಯಾನದ ತರಬೇತಿಗೆ ಒಳಪಟ್ಟು ಧ್ಯಾನವನ್ನು ಮಾಡಬಹುದು. ನಿಮಗೆ ಹಲವಾರು ಅನುಭವಗಳೂ ಆಗಬಹುದು. ಆದರೆ, ನೀವು ಕೆಲವೊಮ್ಮೆ ಕೆಲವು ಪ್ರಶ್ನೆಗಳನ್ನು ಎದುರಿಸುತ್ತೀರಿ – "ಈ ಅನುಭವವು ಯಾವುದೋ ಒಂದು ನಂಬಿಕೆಯಿಂದ ಪ್ರೇರಿತವಾಗಿದ್ದೇ ಅಥವಾ ಒಂದು ನಿರ್ದಿಷ್ಟ ಅಭ್ಯಾಸದ ಸಹಜ ಪರಿಣಾಮವೇ? ಧ್ಯಾನದ ಬಗೆಗಿನ ಯಾವುದೇ ಔಪಚಾರಿಕ ತಿಳಿವಳಿಕೆ ಇಲ್ಲದ ವ್ಯಕ್ತಿಗೂ ಇಂತಹದೇ ಅನುಭವ ಸಿಗಲು ಸಾಧ್ಯವೇ? ಧ್ಯಾನದ ಅನುಭವವು ತಾವೇ ಸ್ವಯಂ ಪ್ರೇರೇಪಿಸಿಕೊಂಡ ಕಲ್ಪನೆಗಳ ಪರಿಣಾಮವೇ? ಅಥವಾ ಅವೆಲ್ಲವುಗಳಿಂದ ಸ್ವತಂತ್ರವಾಗಿದ್ದೇ?" ಇತ್ಯಾದಿ.
ನನ್ನ ಬಾಲ್ಯದ ಅನುಭವವನ್ನು ಗಮನಿಸಿದರೆ, ಇದು ಯಾವುದೇ ನಂಬಿಕೆ ಅಥವಾ ಮಾನಸಿಕ ಹಿನ್ನೆಲೆಯಿಂದ ಸ್ವತಂತ್ರವಾಗಿದೆ ಎಂದು ತಿಳಿಯುತ್ತದೆ. ಆ ಸಮಯದಲ್ಲಿ ನಾನು ಸಂಪೂರ್ಣವಾಗಿ ಮುಗ್ಧನಾಗಿದ್ದೆ, ಪೂರ್ವಾಗ್ರಹ ಇಲ್ಲದವನಾಗಿದ್ದೆ, ಮತ್ತು ಧ್ಯಾನದ ಬಗೆಗೆ ಸಂಪೂರ್ಣ ಅಜ್ಞನಾಗಿದ್ದೆ.
ಆದ್ದರಿಂದ, ಒಬ್ಬರ ಮಾನಸಿಕ ಹಿನ್ನೆಲೆ ಏನೇ ಇರಲಿ, ಈ ಅಭ್ಯಾಸವನ್ನು ಮಾಡುವ ಯಾರಿಗಾದರೂ ಸಹ ಇದು ಸಹಜವಾಗಿ ಸಂಭವಿಸುತ್ತದೆ ಎಂದು ನನಗೆ ಅನಿಸುತ್ತದೆ.
ಅಸಲಿಗೆ ಧ್ಯಾನ ಎಂದರೇನು?
ಇಂದು ನಾವು ಧ್ಯಾನದ ಹಲವಾರು ರೂಪಗಳನ್ನು ಕಾಣುತ್ತೇವೆ. ಆದರೆ ನಾನು ಇಲ್ಲಿ, ಪ್ರಾಚೀನ ಭಾರತೀಯ ಗ್ರಂಥಗಳಾದ ಉಪನಿಷತ್ತುಗಳು, ಪತಂಜಲಿಯ ಯೋಗಸೂತ್ರ ಅಥವಾ ಬೌದ್ಧರ ತಿಪಿಟಕಗಳಲ್ಲಿ ವಿವರಿಸಲಾದ ಅಂಶಗಳಿಗೆ ಮಾತ್ರ ಸೀಮಿತವಾಗಿರಬಯಸುತ್ತೇನೆ.
ಧ್ಯಾನ ಎಂಬುದು ಮನಸ್ಸನ್ನು ಹಂತಹಂತವಾಗಿ ಶಾಂತಗೊಳಿಸಿ, ಸಂಪೂರ್ಣವಾದ ಪ್ರಶಾಂತ ಸ್ಥಿತಿಗೆ ತಲುಪಿಸುವ ಒಂದು ಮಾರ್ಗವಾಗಿದೆ. ಆ ಪ್ರಶಾಂತ ಸ್ಥಿತಿಯ ಪರಮಾವಧಿಯಲ್ಲಿ ಒಬ್ಬರು ಸಾಗುವ ಅವಸ್ಥೆಯನ್ನೇ 'ಸಮಾಧಿ' ಎಂದು ಕರೆಯಲಾಗುತ್ತದೆ.
ಮಾಂಡೂಕ್ಯ ಉಪನಿಷತ್ತಿನಂತಹ ಉಪನಿಷತ್ತುಗಳು ಆ ಅಂತಿಮ ಸ್ಥಿತಿಯನ್ನು ಹೀಗೆ ವಿವರಿಸುತ್ತವೆ:
"ಅದು ಬಾಹ್ಯ ಘಟನೆಗಳ ಅರಿವಾಗಲಿ ಅಥವಾ ಆಲೋಚನೆಗಳು ಮತ್ತು ಕನಸುಗಳಂತಹ ಆಂತರಿಕ ಮಾನಸಿಕ ಚಟುವಟಿಕೆಗಳಾಗಲಿ ಇಲ್ಲದ ಒಂದು ಸ್ಥಿತಿ. ಹಾಗೆಂದ ಮಾತ್ರಕ್ಕೆ ಅದು ಪ್ರಜ್ಞಾಶೂನ್ಯವಾದ ಮರಗಟ್ಟಿದ ಸ್ಥಿತಿಯಲ್ಲ. ಅಲ್ಲಿ ಗ್ರಹಿಕೆ ಇರುತ್ತದೆ, ಆದರೆ ಆ ಗ್ರಹಿಕೆ ಲೌಕಿಕ ಜಗತ್ತಿನ ವ್ಯವಹಾರಕ್ಕೆ ಮೀರಿದ್ದು. ಅದು ಪರಮ ಸತ್ಯದ ಗ್ರಹಿಕೆ."
ಬೌದ್ಧ ತಿಪಿಟಕಗಳು ಸಹ ಇದನ್ನು "ಮಾನಸಿಕ ಗಮನವನ್ನು ಹಂತಹಂತವಾಗಿ ಕಿರಿದಾಗಿಸುತ್ತಾ ಹೋಗಿ, ಗ್ರಹಿಕೆ ಮತ್ತು ಗ್ರಹಿಕೆಶೂನ್ಯತೆ ಎರಡೂ ಇಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ" ಎಂದು ವಿವರಿಸುತ್ತವೆ. ಇದು ಮೇಲ್ನೋಟಕ್ಕೆ ಸ್ವಲ್ಪ ಪರಸ್ಪರ ವಿರೋಧಾಭಾಸದಂತೆ ಅನಿಸಬಹುದು. ಆದರೆ, ಅವು ಲೌಕಿಕ ಗ್ರಹಿಕೆಯ ವ್ಯಾಪ್ತಿಗೆ ಮೀರಿದ ಸ್ಥಿತಿಯನ್ನು ಉಲ್ಲೇಖಿಸುತ್ತಿವೆ, ಇದನ್ನು ಅವು 'ಲೋಕುತ್ತರ' ಎಂದು ಕರೆಯುತ್ತವೆ. ತಿಪಿಟಕಗಳು ಈ ಪ್ರಯಾಣದಲ್ಲಿ ಬರುವ ಹಲವಾರು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತವೆ, ಇವುಗಳನ್ನು 'ಝಾನಗಳು' ಎಂದು ಕರೆಯಲಾಗುತ್ತದೆ.
ಪತಂಜಲಿಯು ಸಹ ಇಂತಹುದೇ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾನೆ, ಅಲ್ಲಿ ಮನಸ್ಸನ್ನು ಒಂದು ದೀರ್ಘಾವಧಿಯವರೆಗೆ ಒಂದು ಗುರಿಯ ಮೇಲೆ ಕೇಂದ್ರೀಕರಿಸಲಾಗುತ್ತದೆ. ಅಂತಿಮ ಸಮಾಧಿ ಅಥವಾ ಸಂಪೂರ್ಣ ಪ್ರಶಾಂತ ಸ್ಥಿತಿಯನ್ನು ತಲುಪುವ ಮೊದಲು ಒಬ್ಬರು ಹಾದುಹೋಗುವ ನಾಲ್ಕು ಹಂತಗಳ ಬಗ್ಗೆ ಪತಂಜಲಿಯು ಮಾತನಾಡುತ್ತಾನೆ. ಈ ಪ್ರತಿಯೊಂದು ಹಂತದಲ್ಲೂ ಮಾನಸಿಕ ಚಟುವಟಿಕೆಗಳು ಕ್ರಮೇಣ ಕಡಿಮೆಯಾಗುತ್ತಾ ಬಂದು, ಕೊನೆಗೆ ಬಹುತೇಕ ಶೂನ್ಯವಾಗುತ್ತವೆ.
ಈ ಹಂತಗಳನ್ನು ದಾಟಿದ ನಂತರ ಏನಾಗುತ್ತದೆ?
ಉಪನಿಷತ್ತುಗಳು ಇಡೀ-ಅಸ್ತಿತ್ವದೊಂದಿಗೆ ಒಂದಾಗುವ ಅಂತಿಮ ಸಾಕ್ಷಾತ್ಕಾರದ ಬಗ್ಗೆ ಮಾತನಾಡುತ್ತವೆ. ನಾವು ಸಾಮಾನ್ಯವಾಗಿ ಗ್ರಹಿಸುವ ವೈವಿಧ್ಯತೆಯು ಮನಸ್ಸಿನ ಸೃಷ್ಟಿ ಮತ್ತು, ಇರುವುದು ಒಂದೇ ಒಂದು ಏಕೀಕೃತ ಅಸ್ತಿತ್ವ ಎಂದು ಹೇಳುತ್ತವೆ.
ತಿಪಿಟಕಗಳು ಈ ಅಂತಿಮ ಸ್ಥಿತಿಯ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತವೆ, ಏಕೆಂದರೆ ಆ ಸ್ಥಿತಿಯು ಲೌಕಿಕ ಜಗತ್ತಿಗೆ ಮತ್ತು ಪದಗಳಿಗೆ ಮೀರಿದ್ದು. ತಿಪಿಟಕಗಳ ಅಂತಿಮ ಗುರಿ, ನಮಗೆ ಸತ್ಯದ ಬಗೆಗಿನ ತಪ್ಪು ಕಲ್ಪನೆಯನ್ನು ನೀಡುವ ಮನಸ್ಸಿನ ಆಟಗಳಿಂದ ಹೊರಬರುವುದೇ ಆಗಿದೆ.
ಪತಂಜಲಿಯೂ ಸಹ ಮಾನಸಿಕ ಚಟುವಟಿಕೆಗಳಿಂದ ಉಂಟಾಗುವ ಭ್ರಮೆಯಿಂದ ಮುಕ್ತಿ ಪಡೆಯುವ ಬಗ್ಗೆಯೇ ಮಾತನಾಡುತ್ತಾನೆ. ಈ ಮುಕ್ತಿಯು ವಸ್ತುಗಳನ್ನು ಅವು ನಿಜವಾಗಿ ಹೇಗಿವೆಯೋ ಹಾಗೆ ನೋಡಲು ಒಬ್ಬರಿಗೆ ಸಾಧ್ಯವಾಗಿಸುತ್ತದೆ.
ಇವೆಲ್ಲವೂ ಒಂದು ಮುಖ್ಯವಾದ ಪರಿಕಲ್ಪನೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ:
"ವೈವಿಧ್ಯತೆಯ ಗ್ರಹಿಕೆ ಮನಸ್ಸಿನ ಸೃಷ್ಟಿಯಾಗಿದೆ ಮತ್ತು ಮನಸ್ಸು ಸಂಪೂರ್ಣವಾಗಿ ಶಾಂತವಾದಾಗ, ಒಂದು ಏಕೀಕೃತ ದೃಷ್ಟಿಕೋನವು ಹೊರಹೊಮ್ಮುತ್ತದೆ."
ಈ ಧ್ಯಾನ ಪ್ರಕ್ರಿಯೆ ಮತ್ತು ಅದರ ಅಂತಿಮ ಸ್ಥಿತಿಯ ಬಗ್ಯೆ ವಿಜ್ಞಾನವೇನು ಹೇಳುತ್ತದೆ? ಇದು ಸಂಪೂರ್ಣವಾಗಿ ಮೆದುಳಿನ ವಿದ್ಯಮಾನವೇ? ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಒಂದು ಹಂತಕ್ಕೆ ನಿಮ್ಮ ಮೆದುಳನ್ನು ನೀವು ಧ್ಯಾನದ ಮೂಲಕ ತಳ್ಳುತ್ತಿದ್ದೀರಾ?
ನಾವು ಅಂತಹ ಯಾವುದೇ ತೀರ್ಮಾನಕ್ಕೆ ಬರುವ ಮೊದಲು, ಧ್ಯಾನದ ವಿವಿಧ ಹಂತಗಳಲ್ಲಿ ನಿಖರವಾಗಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ.
ಬೌದ್ಧ ಧ್ಯಾನ ಪದ್ಧತಿಗಳು ಒಬ್ಬರು ಧ್ಯಾನವನ್ನು ಪ್ರಾರಂಭಿಸುವ ಮೊದಲೇ ಕಟ್ಟುನಿಟ್ಟಾದ ನಡವಳಿಕೆಯ ನಿಯಮಗಳನ್ನು ಜಾರಿಗೊಳಿಸುತ್ತವೆ. ಇದನ್ನು ಅಷ್ಟಾಂಗ ಮಾರ್ಗ ಎಂದು ಕರೆಯಲಾಗುತ್ತದೆ; ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಕ್ ಆಜೀವ, ಸಮ್ಯಕ್ ಪ್ರಯತ್ನ, ಸಮ್ಯಕ್ ಏಕಾಗ್ರತೆ ಮತ್ತು ಸಮ್ಯಕ್ ಸಮಾಧಿ. ಇವುಗಳಲ್ಲಿ ಮೊದಲ ಆರು ನಿಯಮಗಳು ವ್ಯಕ್ತಿಯನ್ನು ಮಾನಸಿಕವಾಗಿ ಮುಂದಿನ ಪ್ರಯಾಣಕ್ಕೆ ಸಿದ್ಧಗೊಳಿಸುತ್ತವೆ.
ಪತಂಜಲಿಯ ಯಮ ಮತ್ತು ನಿಯಮಗಳ ಹತ್ತು ಅಂಗಗಳು ಬಹುತೇಕ ಈ ಆರು ನಿಯಮಗಳೊಂದಿಗೆ ಹೊಂದಿಕೆಯಾಗುತ್ತವೆ.
ನರವಿಜ್ಞಾನದ ಪರಿಭಾಷೆಯಲ್ಲಿ, ಈ ಆರು ನಿಯಮಗಳು ಅನಿಯಂತ್ರಿತ ಮೆದುಳಿನಲ್ಲಿ ಉಂಟಾಗುವ ನರಕೋಶಗಳ ಅತಿಯಾದ ತಲ್ಲಣವನ್ನು ಅಥವಾ ಮೆದುಳಿನ ಚಟುವಟಿಕೆಗಳ ಸರಣಿ ಉಲ್ಬಣವನ್ನು ಕಡಿಮೆಮಾಡುವಲ್ಲಿ ಸಹಾಯಮಾಡುತ್ತವೆ. ಹೆಚ್ಚಾಗಿ ಇದನ್ನು ಧ್ಯಾನದ ಮುಖ್ಯ ಪ್ರಯೋಜನವೆಂದು ನೋಡಲಾಗುತ್ತದೆ, ಅಂದರೆ ಒತ್ತಡ ನಿವಾರಣೆ. ಆದರೆ, ಸಂಪೂರ್ಣವಾಗಿ ಶಾಂತವಾದ ಮನಸ್ಸಿನ ಅಂತಿಮ ಸ್ಥಿತಿಯನ್ನು ತಲುಪಲು ಕೇವಲ ಇದು ಮಾತ್ರ ಸಾಕಾಗುವುದಿಲ್ಲ.
ಆ ಹಂತವನ್ನು ತಲುಪಲು, ಗಮನವನ್ನು ನಿರಂತರವಾಗಿ ಕಿರಿದಾಗಿಸುವ ಸಾಮರ್ಥ್ಯವಿರಬೇಕು. ಬೌದ್ಧರು ಇದನ್ನು ಸಾಧಿಸಲು ಸಹಾಯ ಮಾಡುವ 'ಕಾಯಸತಿ' ಮತ್ತು 'ಆನಾಪಾನಸತಿ'ಯಂತಹ ಅಭ್ಯಾಸಗಳನ್ನು ಸೂಚಿಸುತ್ತಾರೆ. ಈ ತಂತ್ರಗಳನ್ನು ಬಳಸಿಕೊಂಡು ಒಬ್ಬರು, ಆಯ್ದ ಲಕ್ಷ್ಯದ ಮೇಲೆ ಸಂಪೂರ್ಣಗಮನ ಹರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು. ಪತಂಜಲಿಯು ಇದೇ ಸಾಮರ್ಥ್ಯವನ್ನು ಪಡೆಯಲು 'ಪ್ರಾಣಾಯಾಮ'ದ ಬಗ್ಗೆ ಮಾತನಾಡುತ್ತಾನೆ.
ನರವಿಜ್ಞಾನದ ಪರಿಭಾಷೆಯಲ್ಲಿ, ಇದು ಮೆದುಳಿನ ಮಧ್ಯಭಾಗದಲ್ಲಿರುವ ಗಮನಕ್ಕೆ ಸಂಬಂಧಿಸಿದ ರಚನೆಗಳಿಗೆ, ಅಂದರೆ 'ಥಾಲಮಿಕ್ ಸರ್ಕ್ಯೂಟ್ಗಳಿಗೆ' ತರಬೇತಿ ನೀಡುವ ಪ್ರಕ್ರಿಯೆಯಾಗಿದೆ. ಈ ಸರ್ಕ್ಯೂಟ್ಗಳಿಗೆ ಸರಿಯಾದ ತರಬೇತಿ ದೊರೆತಾಗ, ಅವು ಯಾವುದೇ ಗೊಂದಲಗಳಿಲ್ಲದೆ ಒಂದೇ ಗುರಿಯ ಮೇಲೆ ಗಮನ ಕೇಂದ್ರೀಕರಿಸಲು ಶಕ್ತವಾಗುತ್ತವೆ.
ಒಬ್ಬರು ಧ್ಯಾನದಲ್ಲಿ ಮುಂದುವರೆದಂತೆ, ಕ್ರಮೇಣ ತಮ್ಮ ಗಮನವನ್ನು ತೀಕ್ಷ್ಣಗೊಳಿಸುತ್ತಾರೆ. ಇದು ಬೌದ್ಧರು ಹೇಳುವ ಆರಂಭಿಕ 'ಝಾನಗಳ' ಹಂತಗಳ ಮೂಲಕ ಮತ್ತು ಪತಂಜಲಿಯು ಹೇಳುವ 'ಸಂಪ್ರಜ್ಞಾತ ಸಮಾಧಿ'ಯ ವಿವಿಧ ಹಂತಗಳ ಮೂಲಕ ವ್ಯಕ್ತಿಯನ್ನು ಕರೆದೊಯ್ಯುತ್ತದೆ.
ಈ ಹಂತಗಳಲ್ಲಿ ಒಬ್ಬರ ಮಾನಸಿಕ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಹೋಗಿ, ಕೊನೆಗೆ ಮನಸ್ಸಿನ ವ್ಯಾಪ್ತಿಗೂ ಮೀರಿದ ಒಂದು ಸ್ಥಿತಿಯನ್ನು ತಲುಪುತ್ತವೆ.
ನಮ್ಮ ಯಾವುದೇ ಗ್ರಂಥಗಳೂ ಆ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸುವುದಿಲ್ಲ, ಏಕೆಂದರೆ ಲೌಕಿಕ ಗ್ರಹಿಕೆಗಳ ಸಂದರ್ಭಗಳಲ್ಲಿ ಬಳಸುವ ನಮ್ಮ ಶಬ್ದಕೋಶವು ಆ ಅಲೌಕಿಕ ಸ್ಥಿತಿಯನ್ನು ವಿವರಿಸಲು ಸಾಕಾಗುವುದಿಲ್ಲ.
ಈ ಬಗ್ಗೆ ನರವಿಜ್ಞಾನ ಏನು ಹೇಳುತ್ತದೆ?
ಮೆದುಳಿನ ಅಧ್ಯಯನಗಳು, ಧ್ಯಾನಮಾಡುವಾಗ ಮೆದುಳಿನ ಚಟುವಟಿಕೆಗಳು ಕ್ರಮೇಣ ಕ್ಷೀಣಿಸುತ್ತಾ ಬಂದು, ಚಟುವಟಿಕೆಯು ಕೇವಲ ಅತ್ಯಂತ ಕಿರಿದಾದ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗುವುದನ್ನು ಖಚಿತಪಡಿಸಿವೆ. ಸಾಮಾನ್ಯ ಗೊಂದಲಮಯ ಚಟುವಟಿಕೆಗಳು ಬಹುತೇಕ ಇಲ್ಲವಾಗುತ್ತವೆ. ಆದರೆ, ಆ ಹಂತವನ್ನೂ ಮೀರಿದ ನಂತರ ಏನಾಗುತ್ತದೆ ಎಂಬುದರ ಬಗ್ಗೆ ನರವಿಜ್ಞಾನವು ಯಾವುದೇ ಊಹೆಯನ್ನು ಮಾಡಲು ಮುಂದಾಗುವುದಿಲ್ಲ.
ಇವೆಲ್ಲವೂ ಈ ಅಭ್ಯಾಸಗಳಿಗೆ ಒಂದು ನಿರ್ದಿಷ್ಟವಾದ ಪರಿಣಾಮವಿದೆ ಎಂಬುದನ್ನು ಖಚಿತಪಡಿಸುತ್ತವೆ. ಆದರೆ ಈ ಪರಿಣಾಮಗಳು ಸಂಪೂರ್ಣವಾಗಿ ದೈಹಿಕವೇ ಅಥವಾ ಅವುಗಳಿಗೆ ಯಾವುದೇ ಪಾರಮಾರ್ಥಿಕ ಆಯಾಮಗಳೂ ಇವೆಯೇ?
ವಿಜ್ಞಾನವು ಕೇವಲ ಭೌತಿಕತೆಗೆ ಸೀಮಿತವಾಗಿದೆ ಮತ್ತು ಅದು ಅದರಾಚೆಗೆ ಹೋಗಲು ಧೈರ್ಯ ಮಾಡುವುದಿಲ್ಲ.
ಎಲ್ಲಾ ಪ್ರಾಚೀನ ಗ್ರಂಥಗಳು ಇದು ಕೇವಲ ದೈಹಿಕ ಸ್ಥಿತಿಯಲ್ಲ ಎಂದು ದೃಢಪಡಿಸುತ್ತವೆ. ಕೇವಲ ಭೌತಿಕ ನಿಯಮಗಳಿಂದ ವಿವರಿಸಲು ಸಾಧ್ಯವಾಗದ ಧ್ಯಾನದ ವಿವಿಧ ಉಪಲಬ್ಧಿಗಳನ್ನು ಅವು ಉಲ್ಲೇಖಿಸುತ್ತವೆ. ಉದಾಹರಣೆಗೆ ಇಂದ್ರಿಯಗಳ ಮಿತಿಯನ್ನು ಮೀರಿ ಗ್ರಹಿಸುವ ಸಾಮರ್ಥ್ಯ; ಭೂತಕಾಲ ಮತ್ತು ಭವಿಷ್ಯತ್ತನ್ನು ಇಣುಕಿ ನೋಡುವ ಸಾಮರ್ಥ್ಯ; ಇತರರ ಮನಸ್ಸನ್ನು ಓದುವ ಸಾಮರ್ಥ್ಯ; ಯಾವುದೇ ಪ್ರತ್ಯಕ್ಷ ಸಂವಹನವಿಲ್ಲದೆ ಇತರರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ; ಪೂರ್ವಜನ್ಮಗಳ ನೆನಪು ಇತ್ಯಾದಿ.
ನರವಿಜ್ಞಾನವು ಹೆಚ್ಚಾಗಿ ಇವುಗಳ ಬಗ್ಗೆ ಸಂದೇಹವಾದಿ ನಿಲುವನ್ನು ತಳೆಯುತ್ತದೆ ಮತ್ತು ಅವುಗಳ ಬಗ್ಗೆ ನಿರಾಕರಿಸಲಾಗದ ಪುರಾವೆಗಳನ್ನು ಕೇಳುತ್ತದೆ. ಆದರೆ, ಅನೇಕ ಗಂಭೀರ ಧ್ಯಾನಿಗಳು ಇಂತಹ ಸಾಮರ್ಥ್ಯಗಳನ್ನು ಪ್ರದರ್ಶಿಸುವುದು ನಿಜ. ಇದು ಕಡು ಸಂದೇಹವಾದಿಗಳನ್ನೂ ಸಹ ಬೆರಗುಗೊಳಿಸುತ್ತದೆ.
ನಾನು ಧ್ಯಾನದ ಬಗ್ಗೆ ತೆರೆದ ಮನಸ್ಸಿನ ನಿಲುವನ್ನು ತಳೆದಿದ್ದೇನೆ, ಇಂತಹ ಸಾಮರ್ಥ್ಯಗಳು ಸಾಧ್ಯ ಎಂದು ನನಗೆ ಮನವರಿಕೆಯಾಗಿದ್ದರೂ ಸಹ.
ಈ ಸಾಮರ್ಥ್ಯಗಳ ಸತ್ಯಾಸತ್ಯತೆ ಏನೇ ಇರಲಿ, ಧ್ಯಾನವು ಒಂದು ವಿಶಾಲವಾದ, ಏಕೀಕರಿಸುವ ಪರಿಣಾಮವನ್ನು ಹೊಂದಿದೆ ಎಂದೇ ನಾನು ನಂಬಿದ್ದೇನೆ; ಅದು ಕಿರಿದಾದ, ಸ್ವಕೇಂದ್ರಿತವಾದ ಗುರುತುಗಳನ್ನು ಮೀರಿದ ಏಕೀಕರಣವಾಗಿದೆ. ಆ ಉಪಲಬ್ದಿಯೇನೂ ಖಂಡಿತ ಕಡಿಮೆಯಲ್ಲ.
ನಿಮಗೆ ಹೇಗೆ ಅನಿಸುತ್ತದೆ? ನಿಮ್ಮ ವಿಚಾರವನ್ನು ಬರೆದು ತಿಳಿಸಿ. ಮತ್ತೊಮ್ಮೆ ಭೇಟಿಯಾಗೋಣ.

--------------------------------------------------------------------
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.

© Dr. King, Swami Satyapriya 2026

No comments:
Post a Comment