ಒಂದು ಸರಳ ಚಿತ್ರಣದೊಂದಿಗೆ ನಮ್ಮ ಚರ್ಚೆಯನ್ನು ಪ್ರಾರಂಭಿಸೋಣ.
ಒಂದು 100 ಮೀಟರ್, ಓಟದ ಸ್ಪರ್ಧೆಯನ್ನು ಕಲ್ಪಿಸಿಕೊಳ್ಳಿ. ಒಂದು ನ್ಯಾಯಯುತ ಜಗತ್ತಿನಲ್ಲಿ, ಪ್ರತಿಯೊಬ್ಬರೂ ಶೂನ್ಯ ಮೀಟರ್ ಲೈನ್ನಲ್ಲಿ ನಿಲ್ಲುತ್ತಾರೆ. ಸ್ಟಾರ್ಟರ್ ಪಿಸ್ತೂಲ್ ಸದ್ದು ಮಾಡುತ್ತದೆ, ಸೀಟಿ ಊದಲಾಗುತ್ತದೆ, ಮತ್ತು ಯಾರು ಅತ್ಯಂತ ವೇಗವಾಗಿ ಓಡುತ್ತಾರೋ ಅವರು ಗೆಲ್ಲುತ್ತಾರೆ. ಸರಳವಾಗಿದೆ, ಅಲ್ವಾ?
ಆದರೆ ದುರದೃಷ್ಟವಶಾತ್ ನಾವು ಅಂತಹ ಜಗತ್ತಿನಲ್ಲಿ ಬದುಕುತ್ತಿಲ್ಲ.

ನಿಜವಾದ ಜಗತ್ತಿನಲ್ಲಿ, — ನೀವು ನ್ಯೂಯಾರ್ಕ್, ಲಂಡನ್, ಟೋಕಿಯೋ ಅಥವಾ ನವದೆಹಲಿ, ಹೀಗೆ ಎಲ್ಲೇ ಇರಲಿ—ಈ ಓಟದ ಸ್ಪರ್ಧೆಯು ಅಷ್ಟು ನ್ಯಾಯಯುತವಾಗಿರುವುದಿಲ್ಲ. ಓಟ ಪ್ರಾರಂಭವಾಗುವ ಮುನ್ನವೇ ಕೆಲವರು ಈಗಾಗಲೇ 50 ಮೀಟರ್ ಮಾರ್ಕ್ನಲ್ಲಿ ನಿಂತು ಓಟವನ್ನು ಆರಂಭಿಸುತ್ತಾರೆ, ಇನ್ನು ಕೆಲವರು ಆರಂಭಿಕ ರೇಖೆಗಿಂತ 20 ಮೀಟರ್ ಹಿಂದಿನಿಂದ ಪ್ರಾರಂಭಿಸಬೇಕಾಗುತ್ತದೆ,
ನಾನು ಮಾತನಾಡುತ್ತಿರುವ ಓಟದ ಬಗ್ಗೆ ನೀವು ಈಗಾಗಲೇ ಊಹಿಸಿರಬೇಕು. ಅದೇ, ಸಾಮಾಜಿಕ ಅಸಮಾನತೆಯೆಂಬ ಓಟ.
ದಶಕಗಳಿಂದ ಜಗತ್ತಿನಾದ್ಯಂತ ಸಮಾಜಗಳು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಲೇ ಇವೆ. ಅಮೆರಿಕಾದಂತಹ ದೇಶಗಳಲ್ಲಿ 'ಅಫರ್ಮೇಟಿವ್ ಆಕ್ಷನ್, ಯುರೋಪ್ನಲ್ಲಿ 'ಸಾಮಾಜಿಕ ವೈವಿಧ್ಯತೆಯ ಕೋಟಾಗಳು', ಮತ್ತು ಏಷ್ಯಾದಲ್ಲಿ 'ಮೀಸಲಾತಿ ವ್ಯವಸ್ಥೆ'ಯ ಮೂಲಕ ಈ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ.
ಇವೆಲ್ಲವೂ ಒಳ್ಳೆಯ ಉದ್ದೇಶದ ಪ್ರಯತ್ನಗಳೇ ಆಗಿವೆ. ಆದರೆ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕಾದ ವಿಷಯವೆಂದರೆ ಪ್ರಸ್ತುತ ಈ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲಗೊಂಡಿವೆ.
ಇವು ಅಸಮಾನತೆಯನ್ನು ಪರಿಹರಿಸುವ ಬದಲಿಗೆ, ರಾಜಕೀಯದ ಯುದ್ಧಭೂಮಿಗಳಾಗಿ ಮಾರ್ಪಟ್ಟಿವೆ. ರಾಜಕೀಯ ನಾಯಕರು ಚುನಾವಣೆಗಳನ್ನು ಗೆಲ್ಲಲು, ಮತ್ತು ತಮ್ಮ ವೋಟ್-ಬ್ಯಾಂಕ್ ಗಳನ್ನು ಭದ್ರಪಡಿಸಿಕೊಳ್ಳಲು ಆಡುವ ರಾಜಕೀಯ ಫುಟ್ಬಾಲ್ ಆಟಗಳಾಗಿ ಇವು ಬದಲಾಗಿವೆ. ಆದರೆ ಅಸಲಿಸಮಸ್ಯೆ ಮಾತ್ರ ಹಾಗೇ ಉಳಿದು, ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.
ನಾವು ಪ್ರಸ್ತುತ ಬಳಸುತ್ತಿರುವ ಈ ಹಳೆಯ ಪದ್ಧತಿಯಲ್ಲಿ ನಾವೆಲ್ಲರೂ ಕಾಣುವ, ಆದರೆ ಯಾರೂ ಬಹಿರಂಗವಾಗಿ ಮಾತನಾಡಲು ಇಷ್ಟಪಡದ ಎರಡು ದೊಡ್ಡ ದೋಷಗಳಿವೆ.
ನಾವು, "ನೀವು ಯಾವ ಜನಾಂಗದವರು?" ಎಂದು ಕೇಳುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ, "ನಿಮ್ಮ ಹೋರಾಟದ ಹಾದಿ ಹೇಗಿತ್ತು?" ಎಂದು ಕೇಳಲು ಪ್ರಾರಂಭಿಸಬೇಕು. ನಾವು ರಾಜಕೀಯದಿಂದ ಮೇಲೆದ್ದು ನ್ಯಾಯಯುತ ಅವಕಾಶಗಳ ಕಡೆಗೆ ಸಾಗಬೇಕಿದೆ.
ಇದನ್ನು ನಾವು ರಾಜಕೀಯ ಘೋಷಣೆಗಳ ಮೂಲಕ ಅಲ್ಲ, ಕೃತಕ ಬುದ್ಧಿಮತ್ತೆ ಆಧರಿತ, ಪಾರದರ್ಶಕವಾದ ನ್ಯಾಯಯುತ ವ್ಯವಸ್ಥೆಯ ಮೂಲಕ ಸಾಧಿಸಬಹುದು.
ಈ ವ್ಯವಸ್ಥೆ ನಿಜವಾಗಿಯೂ ಕೆಲಸ ಮಾಡೀತೇ ಎಂಬುದನ್ನು ತಿಳಿದುಕೊಳ್ಳಲು ನಾವು ಭಾರತದಂತಹ ದೇಶದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಈ ಕಲ್ಪನೆಗೆ ಭಾರತವೇ ಅತ್ಯಂತ ಸೂಕ್ತವಾದ ಪ್ರಯೋಗಶಾಲೆ. ಏಕೆಂದರೆ
ಭಾರತವು ಕಳೆದ ಎಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಜಾತಿಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ನಡೆಸುತ್ತಿದೆ. ಆದರೆ ಶೋಷಿತ ಸಮುದಾಯಗಳಲ್ಲೇ ಇರುವ ಶ್ರೀಮಂತ ವರ್ಗದವರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ,. ಇದರಿಂದಾಗಿ ಹಳ್ಳಿಯ ಕಟ್ಟಕಡೆಯ ಬಡ ನಾಗರಿಕರು ಇಂದಿಗೂ ವಂಚಿತರಾಗಿಯೇ ಉಳಿದಿದ್ದಾರೆ.
ಆದರೆ, ಯಾವುದೇ ರಾಜಕಾರಣಿಗೆ, ಒಂದು ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕುವುದು ರಾಜಕೀಯ ಆತ್ಮಹತ್ಯೆಗೆ ಸಮಾನ. ಹಾಗಾಗಿ ಈ ಇಡೀ ವ್ಯವಸ್ಥೆ ಸ್ಥಗಿತಗೊಂಡಿದೆ.
ಭಾರತದ ಇಂದಿನ ಆಧುನಿಕ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಒಮ್ಮೆ ಗಮನಿಸಿ.
ಅಂದರೆ, ನಮಗೆ ಬೇಕಾದ ದತ್ತಾಂಶ ಈಗಾಗಲೇ ಲಭ್ಯವಿದೆ.
ಒಂದು ಬ್ಯಾಂಕ್ ಕೇವಲ ಐದೇ ಸೆಕೆಂಡುಗಳಲ್ಲಿ ಒಬ್ಬ ವ್ಯಕ್ತಿಯ ಡಿಜಿಟಲ್ ಹೆಜ್ಜೆಗುರುತುಗಳನ್ನು ನೋಡಿ, ಆತನಿಗೆ 50,000 ಸಾಲ ನೀಡಬಹುದೇ ಎಂದು ನಿರ್ಧರಿಸಲು ಸಾಧ್ಯವಿದೆ. ಹಾಗಿರುವಾಗ ಕಾಲೇಜುಸೀಟು ಅಥವಾ ಉದ್ಯೋಗ, ಯಾರಿಗೆ ಅತ್ಯಂತ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ನಾವು A I, ಆಧರಿತ ಅಲ್ಗಾರಿದಮ್ ಅನ್ನು ಏಕೆ ಬಳಸಬಾರದು?
ಇಲ್ಲಿ ಜಾತಿಪ್ರಮಾಣಪತ್ರದ ಬದಲಿಗೆ, ಈ ನ್ಯಾಯಯುತ ವ್ಯವಸ್ಥೆಯು ಒಂದು ನಿರಂತರ ಬದಲಾಗುವ "ಸಾಮಾಜಿಕ ಸ್ಥಿತಿಯ ಅಂಕಗಳನ್ನು" ಲೆಕ್ಕಹಾಗುತ್ತದೆ. ಇದನ್ನು ಕ್ರೆಡಿಟ್ ಸ್ಕೋರ್ನಂತೆ ಯೋಚಿಸಿ, ಆದರೆ ಇದು ಕೇವಲ ಜನನದಾಖಲೆಯನ್ನಷ್ಟೇ ನೋಡುವ ಬದಲಿಗೆ, ನೀವು ಜೀವನದಲ್ಲಿ ದಾಟಬೇಕಾಗಿ ಬಂದ ನಿಜವಾದ ಅಡೆತಡೆಗಳನ್ನು ಲೆಕ್ಕ ಹಾಕುತ್ತದೆ.
ಈ ವ್ಯವಸ್ಥೆಯಲ್ಲಿ A I, ಕನಿಷ್ಠ ನಾಲ್ಕು ಸರಳ ನಿಯಮಗಳ ಮೂಲಕ ಓಟದ ಸ್ಪರ್ಧೆಯನ್ನು ನ್ಯಾಯಯುತವಾಗಿ ನಿರ್ಣಯಿಸಬಹುದು:
ಇದು ಒಂದು ಸೂಚ್ಯ ವಿವರವಷ್ಟೇ. ನಿಜವಾದ A I, ಆಧರಿತ ನ್ಯಾಯವ್ಯವಸ್ಥೆಯು ಹೆಚ್ಚು ಸಂಕೀರ್ಣವಾಗಿರಬಹುದು. ಆದರೆ ಅಸಾಧ್ಯವೇನಲ್ಲ.
ಇದು ಕೇವಲ ಭಾರತಕ್ಕೇ ಸೀಮಿತವಾದ ಪರಿಹಾರವಲ್ಲ; ಇದು ಇಡೀ ಜಗತ್ತಿಗೆ ಒಂದು ಮಾದರಿ. ಈ ವ್ಯವಸ್ಥೆಯ A I, ಆಧರಿತ ಅಳವಡಿಕೆಯು ಜಗತ್ತಿಗೆಲ್ಲ ಒಂದೇ. ಆದರೆ ಆಯಾ ದೇಶದ ಪರಿಸ್ಥಿತಿಗೆ ತಕ್ಕಂತೆ ಅದರ ಡೇಟಾ ಮತ್ತು ಆದ್ಯತೆಗಳು ಬದಲಾಗುತ್ತವೆ ಅಷ್ಟೆ.
ಈ ಮಾದರಿಯನ್ನು ವಿಶ್ವದ ಬೇರೆ ಬೇರೆ ದೇಶಗಳ ಸನ್ನಿವೇಶಕ್ಕೆ ಅಳವಡಿಸಿದರೆ, ಅದು ಅಲ್ಲಿನ ನೈಜತೆಗೆ ತಕ್ಕಂತೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ:
ಆದರೆ ಇಲ್ಲಿದೆ ನೋಡಿ, ಅತ್ಯಂತ ಪ್ರಮುಖವಾದ ಭಾಗ, —ಆಶ್ಚರ್ಯದ ಆ ಒಂದು ಕ್ಷಣ. ನೀವು ಮೀಸಲಾತಿಯನ್ನು ವಿರೋಧಿಸುವವರಾಗಿರಲಿ ಅಥವಾ ಬೆಂಬಲಿಸುವವರಾಗಿರಲಿ, ಪ್ರತಿಯೊಬ್ಬರನ್ನೂ ಒಪ್ಪಿಸುವಂತಹ ಸತ್ಯ ಇದು.
ಮಾನವ ಚಾಲಿತ ಅಥವಾ ರಾಜಕೀಯ ಕೋಟಾ ಪದ್ಧತಿಯು ಎಂದೆಂದೂ ಹರಿಯುತ್ತಲೇ ಇರುವ ನೀರಿನ ನಲ್ಲಿ ಇದ್ದಂತೆ; ಅದನ್ನು ಒಮ್ಮೆ ಆನ್ ಮಾಡಿದರೆ, ರಾಜಕೀಯ ಕಾರಣಗಳಿಂದ ಅದು ಎಂದಿಗೂ ಆಫ್ ಆಗುವುದಿಲ್ಲ. ಆದರೆ ಈ AI-ಚಾಲಿತ ವ್ಯವಸ್ಥೆ ಸ್ವಭಾವತಃ ಒಂದು "ಸ್ವಯಂ-ಕರಗುವ" (Self-Dissolving) ವ್ಯವಸ್ಥೆಯಾಗಿದೆ.
ಈ ಅಲ್ಗಾರಿದಮ್ ಯಶಸ್ವಿಯಾಗಿ ಅರ್ಹರನ್ನು ಗುರುತಿಸಿ, ಅವರಿಗೆ ಆದ್ಯತೆಯ ಅಂಕಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಂತೆ, ಸಿಸ್ಟಮ್ಗೆ ಹೊಸದಾಗಿ ಬರುವ ದತ್ತಾಂಶಗಳು ಬದಲಾಗುತ್ತವೆ. ಒಂದು ನಿರ್ದಿಷ್ಟ ಪ್ರದೇಶದ ಅಥವಾ ಸಮುದಾಯದ ಮಕ್ಕಳು ಇತರರಂತೆಯೇ ಅದೇ ಪ್ರಮಾಣದಲ್ಲಿ ಪದವಿ ಪಡೆಯುತ್ತಿದ್ದಾರೆ, ಸಂಪಾದಿಸುತ್ತಿದ್ದಾರೆ ಮತ್ತು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ದತ್ತಾಂಶಗಳು ತೋರಿಸಿದಾಗ, ಅವರಿಗೆ "ಆದ್ಯತೆಯ ಅಂಕಗಳನ್ನು" ನೀಡುವುದನ್ನು A I, ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.
ಈ ಬದಲಾವಣೆಗೆ ಸಂಸತ್ತಿನಲ್ಲಿ ಯಾವುದೇ ಹೊಸ ಕಾಯ್ದೆಯ ಅಗತ್ಯವಿರುವುದಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪು ಬೇಕಾಗಿಲ್ಲ. ಯಾವುದೇ ಸಾಮಾಜಿಕ ಪ್ರತಿಭಟನೆ ಅಥವಾ ಮುಷ್ಕರದ ಅಗತ್ಯವಿರುವುದಿಲ್ಲ! ಈ ವ್ಯವಸ್ಥೆಯು ತನ್ನದೇ ಯಶಸ್ಸಿನ ಮೂಲಕ ತನ್ನ ಅಸ್ತಿತ್ವವನ್ನು ತಾನೇ ಶಾಂತಿಯುತವಾಗಿ ಮುಗಿಸಿಕೊಳ್ಳುತ್ತದೆ.
ಕೊನೆಗೆ, ಪ್ರತಿಯೊಬ್ಬರ ಸಾಮಾಜಿಕ ಸ್ಥಿತಿಯ ಅಂಕಗಳು ಒಂದೇ ಸಮಾನ ಮಟ್ಟಕ್ಕೆ ಬಂದು ತಲುಪುತ್ತವೆ. ನಿಮ್ಮ ಜನ್ಮವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ನಿಂತಾಗ, ಈ ಆದ್ಯತೆಯ ಅಂಕಗಳು ಶೂನ್ಯಕ್ಕೆ ತಲುಪುತ್ತವೆ. ಕೋಟಾಗಳನ್ನು ರಾಜಕಾರಣಿಗಳು ರದ್ದುಗೊಳಿಸುವ ಅಗತ್ಯವಿರುವುದಿಲ್ಲ—ಅವು ಗಣಿತದ ದೃಷ್ಟಿಯಿಂದ ತಾವಾಗಿಯೇ ಅರ್ಥಹೀನವಾಗುತ್ತವೆ (mathematically irrelevant).
ಉಪಸಂಹಾರ.
ನಮ್ಮ ಬಳಿ ದತ್ತಾಂಶವಿದೆ, A I, ಅಂತಹ ಸಮರ್ಥ ತಂತ್ರಜ್ಞಾನವೂ ಇದೆ. ನಾವು ಒಂದು 'A I, ಆಧರಿತ ಓಪನ್-ಸೋರ್ಸ್ ಅಲ್ಗಾರಿದಮ್'ಗಾಗಿ ನಿರ್ಧರಿಸಿದರೆ—ಅಲ್ಲಿ ರಹಸ್ಯತೆಯ ಭಯವಿಲ್ಲ. ಅದರ ಕೋಡ್ ಆನ್ಲೈನ್ನಲ್ಲಿ ಪ್ರತಿಯೊಬ್ಬರಿಗೂ ಕಾಣುವಂತೆ ಇರುತ್ತದೆ—ಆಗ ರಾಜಕಾರಣಿಗಳು ಮಾಡಲು ನಿರಾಕರಿಸುವ ನ್ಯಾಯದ ಕೆಲಸವನ್ನು ಈ ಪಾರದರ್ಶಕ ಗಣಿತವೇ ಮಾಡುತ್ತದೆ.
ನಾವು ನಮ್ಮ ಪೂರ್ವಜರು ಯಾರಾಗಿದ್ದರು ಎಂಬುದರ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಸಮಾಜವಾಗುವುದನ್ನು ನಿಲ್ಲಿಸಬೇಕು ಮತ್ತು ನಮ್ಮ ಮಕ್ಕಳು ಏನಾಗಬಹುದು ಎಂಬುದನ್ನು ನೋಡುವ ಸಮಾಜವಾಗಿ ಬದಲಾಗಬೇಕು. ನಾವು ಕಿತ್ತಾಡುವುದನ್ನು ನಿಲ್ಲಿಸೋಣ. ಮತ್ತು ಅತ್ಯುತ್ತಮ ಪ್ರತಿಭೆಯು—ಅದು ಈ ಭೂಮಿಯ ಮೇಲೆ ಎಲ್ಲಿಯೇ ಜನ್ಮತಾಳಿದ್ದರೂ—ಅದು ಬೆಳಗಲು ಬೇಕಾದ ಬೆಂಬಲವನ್ನು ನೀಡಲು ಈ A I, ಆಧರಿತ ನ್ಯಾಯಯುತ ವ್ಯವಸ್ಥೆಯನ್ನು ಬಳಸೋಣ.
ಮುಕ್ತಾಯದ ನುಡಿಗಳು
ನಾನು ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ , ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ ಸಂಪೂರ್ಣವಾಗಿ ದೋಷಮುಕ್ತವಾಗಿದೆ ಎಂದು ನಾನೇನೂ ವಾದಿಸುತ್ತಿಲ್ಲ. ನನಗೂ ಗೊತ್ತು, ಇದರಲ್ಲಿ ಹಲವು ಸವಾಲುಗಳಿವೆ.
ಜನರೇನಾದರೂ ತಮ್ಮ ಡೇಟಾವನ್ನು ವ್ಯವಸ್ಥಿತವಾಗಿ ಮರೆಮಾಚಿ, ಅಲ್ಗಾರಿದಮ್ ಅನ್ನು ವಂಚಿಸಲು ಯೋಚಿಸಿದರೆ ಏನು ಮಾಡುವುದು? ಅಥವಾ ಈ ವ್ಯವಸ್ಥೆಗೆ ಕೋಡ್ ಬರೆಯುವ ಮನುಷ್ಯನೇ ತನ್ನ ಪೂರ್ವಾಗ್ರಹಗಳನ್ನು ಅದರಲ್ಲಿ ತೂರಿಸಿದರೆ ಹೇಗೆ? ಇವೆಲ್ಲವೂ ಖಂಡಿತಾ ಯೋಚಿಸಬೇಕಾದ ಗಂಭೀರ ವಿಷಯಗಳೇ.
ಆದರೆ ನನ್ನ ವಾದ ಇಷ್ಟೇ, ಪ್ರಸ್ತುತ ನಮ್ಮ ಕಣ್ಣಮುಂದಿರುವ ವ್ಯವಸ್ಥೆ ಸಂಪೂರ್ಣವಾಗಿ ಹೆಪ್ಪುಗಟ್ಟಿ ದೆ, ರಾಜಕೀಯದ ಕೆಸರಲ್ಲಿ ಸಿಲುಕಿಕೊಂಡಿದೆ. ನಾವು ಅದನ್ನೇ ಹಿಡಿದು ಸದಾ ಕಿತ್ತಾಡುತ್ತಾ ಕೂರುವ ಬದಲು, ಒಂದು ಹೊಸ ದಾರಿಯ ಬಗ್ಗೆ ಯೋಚಿಸಬೇಕಿದೆ.
ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ' ಒಂದು ಪರಿಪೂರ್ಣವಾದ ಅಂತಿಮ ಪರಿಹಾರವಲ್ಲದಿರಬಹುದು, ಆದರೆ ಬದಲಾವಣೆಯ ಕಡೆಗೆ ನಾವಿಡಬಹುದಾದ ಅತ್ಯುತ್ತಮವಾದ ಮೊದಲ ಹೆಜ್ಜೆಯಂತೂ ಖಂಡಿತ ಹೌದು.
ಬನ್ನಿ, ಹಳೆಯ ಗೋಡೆಗಳನ್ನೇ ಮುಂದೊಡ್ಡಿ ಜಗಳವಾಡುವುದನ್ನು ನಿಲ್ಲಿಸಿ, ಭವಿಷ್ಯದ ಮಕ್ಕಳಿಗಾಗಿ ಒಂದು ಹೊಸ ನ್ಯಾಯದ ತಳಹದಿಯನ್ನು ನಿರ್ಮಿಸುವ ಬಗ್ಗೆ ಚರ್ಚೆ ಆರಂಭಿಸೋಣ.

- ಮೊದಲನೆಯದಾಗಿ, ಇದು ತುಂಬಾ ಸರಳೀಕೃತ ಮತ್ತು ಕೇವಲ ತೋರಿಕೆಯದ್ದಾಗಿದೆ. ಒಬ್ಬ ಒಂದು ನಿರ್ದಿಷ್ಟ ಸಾಮಾಜಿಕ ವರ್ಗ ಅಥವಾ ಜನಾಂಗಕ್ಕೆ ಸೇರಿದವನಾಗಿದ್ದರೆ, ಆತ ಖಂಡಿತವಾಗಿಯೂ ಸಂಕಷ್ಟದಲ್ಲಿದ್ದಾನೆ ಎಂದೇ ಇದು ಭಾವಿಸುತ್ತದೆ. ಆದರೆ ನಮಗೆಲ್ಲರಿಗೂ ಗೊತ್ತು, ಲಂಡನ್ನ ಐಷಾರಾಮಿ ಖಾಸಗಿ ಶಾಲೆಗಳಿಗೆ ಹೋಗುವ ಶ್ರೀಮಂತ 'ನಿಮ್ನವರ್ಗದ ಕುಟುಂಬಗಳೂ' ಇವೆ, ಹಾಗೆಯೇ ಮಕ್ಕಳು ಅಕ್ಷರಶಃ ಹಸಿವಿನಿಂದ ಬಳಲುತ್ತಿರುವ 'ಮೇಲ್ವರ್ಗದ' ಬಡ ಕುಟುಂಬಗಳೂ ಇವೆ. ಒಂದು ಶ್ರೀಮಂತ ಮಗು ಬಡವರಿಗಾಗಿ ಮೀಸಲಿಟ್ಟ ಸೌಲಭ್ಯವನ್ನು ಬಳಸಿಕೊಂಡಾಗ, ಅದು ಅವರದೇ ಸಮುದಾಯದ ನಿಜವಾದ ಅಗತ್ಯವಿರುವ ಮಗುವಿನಿಂದ ಅವಕಾಶವನ್ನು "ಕದಿಯುವ" ಕೃತ್ಯವಾಗುತ್ತದೆ.
- ಎರಡನೆಯದಾಗಿ, ನಮ್ಮ ರಾಜಕೀಯ ಪರಿಹಾರಗಳು ಕಾಲಾಂತರದಲ್ಲಿ ಹೆಪ್ಪುಗಟ್ಟಿಹೋಗಿವೆ. ಒಮ್ಮೆ ಒಂದು ಕಾನೂನು ಅಥವಾ ನೀತಿಯನ್ನು ರೂಪಿಸಿದರೆ, ಅದು ಅಳಿಸಲಾಗದ ರೇಖೆಯಾಗಿಬಿಡುತ್ತದೆ. ಒಂದು ಸಮುದಾಯವು ಕಳೆದ ಕೆಲವು ದಶಕಗಳಲ್ಲಿ ನಿಜವಾಗಿಯೂ ಪ್ರಗತಿ ಹೊಂದಿದೆಯೇ ಎಂಬುದನ್ನು ಈ ವ್ಯವಸ್ಥೆ ಪರಿಗಣಿಸುವುದೇ ಇಲ್ಲ; ಅದು ಈಗಾಗಲೇ ಗುಣಮುಖನಾಗಿರಬಹುದಾದ ರೋಗಿಗೆ ಔಷಧಿಯನ್ನು ನೀಡುತ್ತಾ ಹೋಗುತ್ತದೆ, ಆದರೆ ಅವನ ಪಕ್ಕದಲ್ಲೇ ಸಾಯುತ್ತಿರುವ ವ್ಯಕ್ತಿಗೆ ಔಷಧಿ ಸಿಗುವುದಿಲ್ಲ.
- ಎರಡನೆಯದಾಗಿ, ನಮ್ಮ ರಾಜಕೀಯ ಪರಿಹಾರಗಳು ಕಾಲಾಂತರದಲ್ಲಿ ಹೆಪ್ಪುಗಟ್ಟಿಹೋಗಿವೆ. ಒಮ್ಮೆ ಒಂದು ಕಾನೂನು ಅಥವಾ ನೀತಿಯನ್ನು ರೂಪಿಸಿದರೆ, ಅದು ಅಳಿಸಲಾಗದ ರೇಖೆಯಾಗಿಬಿಡುತ್ತದೆ. ಒಂದು ಸಮುದಾಯವು ಕಳೆದ ಕೆಲವು ದಶಕಗಳಲ್ಲಿ ನಿಜವಾಗಿಯೂ ಪ್ರಗತಿ ಹೊಂದಿದೆಯೇ ಎಂಬುದನ್ನು ಈ ವ್ಯವಸ್ಥೆ ಪರಿಗಣಿಸುವುದೇ ಇಲ್ಲ; ಅದು ಈಗಾಗಲೇ ಗುಣಮುಖನಾಗಿರಬಹುದಾದ ರೋಗಿಗೆ ಔಷಧಿಯನ್ನು ನೀಡುತ್ತಾ ಹೋಗುತ್ತದೆ, ಆದರೆ ಅವನ ಪಕ್ಕದಲ್ಲೇ ಸಾಯುತ್ತಿರುವ ವ್ಯಕ್ತಿಗೆ ಔಷಧಿ ಸಿಗುವುದಿಲ್ಲ.
ನಾವು, "ನೀವು ಯಾವ ಜನಾಂಗದವರು?" ಎಂದು ಕೇಳುವುದನ್ನು ನಿಲ್ಲಿಸಬೇಕು. ಅದರ ಬದಲಿಗೆ, "ನಿಮ್ಮ ಹೋರಾಟದ ಹಾದಿ ಹೇಗಿತ್ತು?" ಎಂದು ಕೇಳಲು ಪ್ರಾರಂಭಿಸಬೇಕು. ನಾವು ರಾಜಕೀಯದಿಂದ ಮೇಲೆದ್ದು ನ್ಯಾಯಯುತ ಅವಕಾಶಗಳ ಕಡೆಗೆ ಸಾಗಬೇಕಿದೆ.
ಇದನ್ನು ನಾವು ರಾಜಕೀಯ ಘೋಷಣೆಗಳ ಮೂಲಕ ಅಲ್ಲ, ಕೃತಕ ಬುದ್ಧಿಮತ್ತೆ ಆಧರಿತ, ಪಾರದರ್ಶಕವಾದ ನ್ಯಾಯಯುತ ವ್ಯವಸ್ಥೆಯ ಮೂಲಕ ಸಾಧಿಸಬಹುದು.
ಈ ವ್ಯವಸ್ಥೆ ನಿಜವಾಗಿಯೂ ಕೆಲಸ ಮಾಡೀತೇ ಎಂಬುದನ್ನು ತಿಳಿದುಕೊಳ್ಳಲು ನಾವು ಭಾರತದಂತಹ ದೇಶದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಈ ಕಲ್ಪನೆಗೆ ಭಾರತವೇ ಅತ್ಯಂತ ಸೂಕ್ತವಾದ ಪ್ರಯೋಗಶಾಲೆ. ಏಕೆಂದರೆ
- ಭಾರತ, ಜಗತ್ತಿನಲ್ಲೇ ಅತ್ಯಂತ ಸಂಕೀರ್ಣವಾದ ಮತ್ತು ಆಳವಾಗಿ ಬೇರೂರಿರುವ ಸಾಮಾಜಿಕ ಶ್ರೇಣೀಕರಣವನ್ನು ಎದುರಿಸುತ್ತಿದೆ.
- ಆದರೆ ಭಾರತದ ಬಳಿ ಒಂದು ಬಹುದೊಡ್ಡ ಪ್ಲಸ್ ಪಾಯಿಂಟ್ ಇದೆ: ಇಂತಹ ಒಂದು ವ್ಯವಸ್ಥೆಯನ್ನು ಅಳವಡಿಸಲು ಆವಶ್ಯಕವಾದ ಡಿಜಿಟಲ್ ತಳಹದಿ ಈಗಾಗಲೇ ಅಲ್ಲಿ ಲಭ್ಯವಿದೆ.
- ಆದರೆ ಭಾರತದ ಬಳಿ ಒಂದು ಬಹುದೊಡ್ಡ ಪ್ಲಸ್ ಪಾಯಿಂಟ್ ಇದೆ: ಇಂತಹ ಒಂದು ವ್ಯವಸ್ಥೆಯನ್ನು ಅಳವಡಿಸಲು ಆವಶ್ಯಕವಾದ ಡಿಜಿಟಲ್ ತಳಹದಿ ಈಗಾಗಲೇ ಅಲ್ಲಿ ಲಭ್ಯವಿದೆ.
ಭಾರತವು ಕಳೆದ ಎಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಸರ್ಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಜಾತಿಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ನಡೆಸುತ್ತಿದೆ. ಆದರೆ ಶೋಷಿತ ಸಮುದಾಯಗಳಲ್ಲೇ ಇರುವ ಶ್ರೀಮಂತ ವರ್ಗದವರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ,. ಇದರಿಂದಾಗಿ ಹಳ್ಳಿಯ ಕಟ್ಟಕಡೆಯ ಬಡ ನಾಗರಿಕರು ಇಂದಿಗೂ ವಂಚಿತರಾಗಿಯೇ ಉಳಿದಿದ್ದಾರೆ.
ಆದರೆ, ಯಾವುದೇ ರಾಜಕಾರಣಿಗೆ, ಒಂದು ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ತೆಗೆದುಹಾಕುವುದು ರಾಜಕೀಯ ಆತ್ಮಹತ್ಯೆಗೆ ಸಮಾನ. ಹಾಗಾಗಿ ಈ ಇಡೀ ವ್ಯವಸ್ಥೆ ಸ್ಥಗಿತಗೊಂಡಿದೆ.
ಭಾರತದ ಇಂದಿನ ಆಧುನಿಕ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಒಮ್ಮೆ ಗಮನಿಸಿ.
- ಭಾರತವು ಬಯೋಮೆಟ್ರಿಕ್ ಆಧರಿತ ನಾಗರಿಕ ಗುರುತಿನ ಚೀಟಿಗಳನ್ನು ಅಳವಡಿಸಿದೆ. ಆ ಗುರುತಿಗೆ ನಿಮ್ಮ ಮೊಬಾಯ್ಲಿನಿಂದ ಹಿಡಿದು ನಿಮ್ಮ ಬ್ಯಾಂಕ್ ಖಾತೆಯವರೆಗೂ ಎಲ್ಲವನ್ನೂ ಹೊಂದಿಸಲಾಗಿದೆ,
- ಸಂಪೂರ್ಣವಾಗಿ ಡಿಜಿಟಲೀಕರಣಗೊಂಡ ಶಾಲಾ-ಕಾಲೇಜುಗಳ ಶೈಕ್ಷಣಿಕ ದಾಖಲೆಗಳು ಸಾಮಾನ್ಯವಾಗುತ್ತಿವೆ.
- ಹೆಚ್ಚುಕಮ್ಮಿ ಟ್ರಾಕ್ ಮಾಡಬಹುದಾದ ಹಣಪಾವತಿ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿದೆ.
- ಮತ್ತು ನಿಮ್ಮ ಗುರುತಿನ ಚೀಟಿಗೆ ಲಿಂಕ್ ಮಾಡಲಾದ ಆದಾಯ ತೆರಿಗೆಯ ಬೃಹತ್ ಡೇಟಾ ನೆಟ್ವರ್ಕ್ ಕೂಡಾ ಲಭ್ಯವಿದೆ.
- ಸಂಪೂರ್ಣವಾಗಿ ಡಿಜಿಟಲೀಕರಣಗೊಂಡ ಶಾಲಾ-ಕಾಲೇಜುಗಳ ಶೈಕ್ಷಣಿಕ ದಾಖಲೆಗಳು ಸಾಮಾನ್ಯವಾಗುತ್ತಿವೆ.
- ಹೆಚ್ಚುಕಮ್ಮಿ ಟ್ರಾಕ್ ಮಾಡಬಹುದಾದ ಹಣಪಾವತಿ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿದೆ.
- ಮತ್ತು ನಿಮ್ಮ ಗುರುತಿನ ಚೀಟಿಗೆ ಲಿಂಕ್ ಮಾಡಲಾದ ಆದಾಯ ತೆರಿಗೆಯ ಬೃಹತ್ ಡೇಟಾ ನೆಟ್ವರ್ಕ್ ಕೂಡಾ ಲಭ್ಯವಿದೆ.
ಅಂದರೆ, ನಮಗೆ ಬೇಕಾದ ದತ್ತಾಂಶ ಈಗಾಗಲೇ ಲಭ್ಯವಿದೆ.
ಒಂದು ಬ್ಯಾಂಕ್ ಕೇವಲ ಐದೇ ಸೆಕೆಂಡುಗಳಲ್ಲಿ ಒಬ್ಬ ವ್ಯಕ್ತಿಯ ಡಿಜಿಟಲ್ ಹೆಜ್ಜೆಗುರುತುಗಳನ್ನು ನೋಡಿ, ಆತನಿಗೆ 50,000 ಸಾಲ ನೀಡಬಹುದೇ ಎಂದು ನಿರ್ಧರಿಸಲು ಸಾಧ್ಯವಿದೆ. ಹಾಗಿರುವಾಗ ಕಾಲೇಜುಸೀಟು ಅಥವಾ ಉದ್ಯೋಗ, ಯಾರಿಗೆ ಅತ್ಯಂತ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ನಾವು A I, ಆಧರಿತ ಅಲ್ಗಾರಿದಮ್ ಅನ್ನು ಏಕೆ ಬಳಸಬಾರದು?
ಇಲ್ಲಿ ಜಾತಿಪ್ರಮಾಣಪತ್ರದ ಬದಲಿಗೆ, ಈ ನ್ಯಾಯಯುತ ವ್ಯವಸ್ಥೆಯು ಒಂದು ನಿರಂತರ ಬದಲಾಗುವ "ಸಾಮಾಜಿಕ ಸ್ಥಿತಿಯ ಅಂಕಗಳನ್ನು" ಲೆಕ್ಕಹಾಗುತ್ತದೆ. ಇದನ್ನು ಕ್ರೆಡಿಟ್ ಸ್ಕೋರ್ನಂತೆ ಯೋಚಿಸಿ, ಆದರೆ ಇದು ಕೇವಲ ಜನನದಾಖಲೆಯನ್ನಷ್ಟೇ ನೋಡುವ ಬದಲಿಗೆ, ನೀವು ಜೀವನದಲ್ಲಿ ದಾಟಬೇಕಾಗಿ ಬಂದ ನಿಜವಾದ ಅಡೆತಡೆಗಳನ್ನು ಲೆಕ್ಕ ಹಾಕುತ್ತದೆ.
ಈ ವ್ಯವಸ್ಥೆಯಲ್ಲಿ A I, ಕನಿಷ್ಠ ನಾಲ್ಕು ಸರಳ ನಿಯಮಗಳ ಮೂಲಕ ಓಟದ ಸ್ಪರ್ಧೆಯನ್ನು ನ್ಯಾಯಯುತವಾಗಿ ನಿರ್ಣಯಿಸಬಹುದು:
- ಸಂಘರ್ಷದ ದಾರಿ. — ಒಬ್ಬನ ಪೋಷಕರು ಈಗಾಗಲೇ ಉನ್ನತ ಮಟ್ಟದ ಸರ್ಕಾರಿ ಕೆಲಸ ಅಥವಾ ಸೌಲಭ್ಯ ಪಡೆಯಲು ಮೀಸಲಾತಿಯನ್ನು ಬಳಸಿಕೊಂಡಿದ್ದರೆ, ಆತನ ಸ್ವಂತ ಅಂಕಗಳು ಕಡಿಮೆಯಾಗುತ್ತವೆ. ಆತನ ಕುಟುಂಬಕ್ಕೆ ಅಗತ್ಯವಿದ್ದ ಬೆಂಬಲ ಸಿಕ್ಕಿದೆ; ಈಗ ಪಕ್ಕಕ್ಕೆ ಸರಿದು, ಹಳ್ಳಿಯ ಮೊದಲ ತಲೆಮಾರಿನ ವಿದ್ಯಾರ್ಥಿಗೆ ಅವಕಾಶ ಮಾಡಿಕೊಡಬೇಕಾಗಿದೆ.
- ಪೋಷಕರ ಹಿನ್ನೆಲೆ. — ಒಬ್ಬನ ಪೋಷಕರು ವೈದ್ಯರು ಅಥವಾ ಇನ್ಯಾವುದೋ ಉನ್ನತ ಕೌಶಲವನ್ನು ಹೊಂದಿದವರಾಗಿದ್ದರೆ, ಆತ, ತುಲನಾತ್ಮಕವಾಗಿ ಸಬಲನಾಗಿರುತ್ತಾನೆ.. ಆತನ ಮನೆಯಲ್ಲಿ ಓದುವ ವಾತಾವರಣವಿರುತ್ತದೆ, ಸರಿಯಾದ ಮಾರ್ಗದರ್ಶನವಿರುತ್ತದೆ ಮತ್ತು ಪ್ರಭಾವಿ ಜನರ ಪರಿಚಯವಿರುತ್ತದೆ. ಆದರೆ ಅನಕ್ಷರಸ್ಥ ಪೋಷಕರ ಮಗು, ಜೀವನದ ಓಟದಲ್ಲಿ ಹಿಂದೆ ಬೀಳುತ್ತದೆ. ಆ ವ್ಯತ್ಯಾಸವನ್ನು ಸರಿದೂಗಿಸಲು A I, ಆ ಮಗುವಿಗೆ ಹೆಚ್ಚು ಅಂಕವನ್ನು ನೀಡುತ್ತದೆ.
- ವ್ಯಕ್ತಿ ಬೆಳೆದ ಪರಿಸರ. — ಮಗು ದಕ್ಷಿಣ ಮುಂಬೈನ ಐಷಾರಾಮಿ ಶಾಲೆಗೆ ಹೋಗಿತ್ತಾ?, ಅಥವಾ ಗ್ರಾಮೀಣ ಬಿಹಾರದ ತಗಡಿನ ಮೇಲ್ಛಾವಣಿಯ ಶಾಲೆಗೆ ಹೋಗಿತ್ತಾ? ಹೈ-ಸ್ಪೀಡ್ ಇಂಟರ್ನೆಟ್ ಅಥವಾ ದುಬಾರಿ ಕೋಚಿಂಗ್ ಕ್ಲಾಸ್ಗಳು ಆ ಮಗುವಿಗೆ ಲಭ್ಯವಿತ್ತೇ? ಇವೆಲ್ಲವುಗಳಿಂದ ಅದು ವಂಚಿತವಾಗಿದ್ದರೆ, ಅವೆಲ್ಲವೂ ಇರುವ ನಗರದ ಮಗುವಿನ 95% ಅಂಕಗಳಿಗಿಂತ ಹಳ್ಳಿಯ ಮಗುವಿನ 80% ಅಂಕಗಳೇ ಹೆಚ್ಚು ಮೌಲ್ಯಯುತವಾದವು ಮತ್ತು ಅದರಲ್ಲಿ ಹೆಚ್ಚು ಪರಿಶ್ರಮವಿದೆ ಎಂಬುದನ್ನು A I, ಗುರುತಿಸುತ್ತದೆ.
- ಐತಿಹಾಸಿಕ ಹೊರೆ. — ಮಗುವಿನ ಸಮುದಾಯವನ್ನು ಐತಿಹಾಸಿಕವಾಗಿ ಅಸ್ಪೃಶ್ಯರು ಅಥವಾ ಶೋಷಿತರಂತೆ ನಡೆಸಿಕೊಂಡಿದ್ದರೆ, ಅದು ಒಂದು ಆಳವಾದ ಮಾನಸಿಕ ಮತ್ತು ಸಾಮಾಜಿಕ ಗೋಡೆಯನ್ನು ಸೃಷ್ಟಿಸಿರುತ್ತದೆ. A I, ಅಂತಹ ಹಿನ್ನೆಲೆಗೆ ಹೆಚ್ಚುವರಿ ಅಂಕವನ್ನು ಕಾಯ್ದಿರಿಸುತ್ತದೆ—ಆದರೆ, ದಶಕಗಳು ಉರುಳಿದಂತೆ, ಸಮುದಾಯದ ಒಟ್ಟಾರೆಶಿಕ್ಷಣ ಮತ್ತು ಜೀವನಮಟ್ಟ ಸುಧಾರಿಸಿದಾಗ, ಅದು ಆ ಅಂಕವನ್ನು ಕ್ರಮೇಣ ಕಡಿಮೆ ಮಾಡುತ್ತಾ ಹೋಗುತ್ತದೆ.
- ಪೋಷಕರ ಹಿನ್ನೆಲೆ. — ಒಬ್ಬನ ಪೋಷಕರು ವೈದ್ಯರು ಅಥವಾ ಇನ್ಯಾವುದೋ ಉನ್ನತ ಕೌಶಲವನ್ನು ಹೊಂದಿದವರಾಗಿದ್ದರೆ, ಆತ, ತುಲನಾತ್ಮಕವಾಗಿ ಸಬಲನಾಗಿರುತ್ತಾನೆ.. ಆತನ ಮನೆಯಲ್ಲಿ ಓದುವ ವಾತಾವರಣವಿರುತ್ತದೆ, ಸರಿಯಾದ ಮಾರ್ಗದರ್ಶನವಿರುತ್ತದೆ ಮತ್ತು ಪ್ರಭಾವಿ ಜನರ ಪರಿಚಯವಿರುತ್ತದೆ. ಆದರೆ ಅನಕ್ಷರಸ್ಥ ಪೋಷಕರ ಮಗು, ಜೀವನದ ಓಟದಲ್ಲಿ ಹಿಂದೆ ಬೀಳುತ್ತದೆ. ಆ ವ್ಯತ್ಯಾಸವನ್ನು ಸರಿದೂಗಿಸಲು A I, ಆ ಮಗುವಿಗೆ ಹೆಚ್ಚು ಅಂಕವನ್ನು ನೀಡುತ್ತದೆ.
- ವ್ಯಕ್ತಿ ಬೆಳೆದ ಪರಿಸರ. — ಮಗು ದಕ್ಷಿಣ ಮುಂಬೈನ ಐಷಾರಾಮಿ ಶಾಲೆಗೆ ಹೋಗಿತ್ತಾ?, ಅಥವಾ ಗ್ರಾಮೀಣ ಬಿಹಾರದ ತಗಡಿನ ಮೇಲ್ಛಾವಣಿಯ ಶಾಲೆಗೆ ಹೋಗಿತ್ತಾ? ಹೈ-ಸ್ಪೀಡ್ ಇಂಟರ್ನೆಟ್ ಅಥವಾ ದುಬಾರಿ ಕೋಚಿಂಗ್ ಕ್ಲಾಸ್ಗಳು ಆ ಮಗುವಿಗೆ ಲಭ್ಯವಿತ್ತೇ? ಇವೆಲ್ಲವುಗಳಿಂದ ಅದು ವಂಚಿತವಾಗಿದ್ದರೆ, ಅವೆಲ್ಲವೂ ಇರುವ ನಗರದ ಮಗುವಿನ 95% ಅಂಕಗಳಿಗಿಂತ ಹಳ್ಳಿಯ ಮಗುವಿನ 80% ಅಂಕಗಳೇ ಹೆಚ್ಚು ಮೌಲ್ಯಯುತವಾದವು ಮತ್ತು ಅದರಲ್ಲಿ ಹೆಚ್ಚು ಪರಿಶ್ರಮವಿದೆ ಎಂಬುದನ್ನು A I, ಗುರುತಿಸುತ್ತದೆ.
- ಐತಿಹಾಸಿಕ ಹೊರೆ. — ಮಗುವಿನ ಸಮುದಾಯವನ್ನು ಐತಿಹಾಸಿಕವಾಗಿ ಅಸ್ಪೃಶ್ಯರು ಅಥವಾ ಶೋಷಿತರಂತೆ ನಡೆಸಿಕೊಂಡಿದ್ದರೆ, ಅದು ಒಂದು ಆಳವಾದ ಮಾನಸಿಕ ಮತ್ತು ಸಾಮಾಜಿಕ ಗೋಡೆಯನ್ನು ಸೃಷ್ಟಿಸಿರುತ್ತದೆ. A I, ಅಂತಹ ಹಿನ್ನೆಲೆಗೆ ಹೆಚ್ಚುವರಿ ಅಂಕವನ್ನು ಕಾಯ್ದಿರಿಸುತ್ತದೆ—ಆದರೆ, ದಶಕಗಳು ಉರುಳಿದಂತೆ, ಸಮುದಾಯದ ಒಟ್ಟಾರೆಶಿಕ್ಷಣ ಮತ್ತು ಜೀವನಮಟ್ಟ ಸುಧಾರಿಸಿದಾಗ, ಅದು ಆ ಅಂಕವನ್ನು ಕ್ರಮೇಣ ಕಡಿಮೆ ಮಾಡುತ್ತಾ ಹೋಗುತ್ತದೆ.
ಇದು ಒಂದು ಸೂಚ್ಯ ವಿವರವಷ್ಟೇ. ನಿಜವಾದ A I, ಆಧರಿತ ನ್ಯಾಯವ್ಯವಸ್ಥೆಯು ಹೆಚ್ಚು ಸಂಕೀರ್ಣವಾಗಿರಬಹುದು. ಆದರೆ ಅಸಾಧ್ಯವೇನಲ್ಲ.
ಇದು ಕೇವಲ ಭಾರತಕ್ಕೇ ಸೀಮಿತವಾದ ಪರಿಹಾರವಲ್ಲ; ಇದು ಇಡೀ ಜಗತ್ತಿಗೆ ಒಂದು ಮಾದರಿ. ಈ ವ್ಯವಸ್ಥೆಯ A I, ಆಧರಿತ ಅಳವಡಿಕೆಯು ಜಗತ್ತಿಗೆಲ್ಲ ಒಂದೇ. ಆದರೆ ಆಯಾ ದೇಶದ ಪರಿಸ್ಥಿತಿಗೆ ತಕ್ಕಂತೆ ಅದರ ಡೇಟಾ ಮತ್ತು ಆದ್ಯತೆಗಳು ಬದಲಾಗುತ್ತವೆ ಅಷ್ಟೆ.
ಈ ಮಾದರಿಯನ್ನು ವಿಶ್ವದ ಬೇರೆ ಬೇರೆ ದೇಶಗಳ ಸನ್ನಿವೇಶಕ್ಕೆ ಅಳವಡಿಸಿದರೆ, ಅದು ಅಲ್ಲಿನ ನೈಜತೆಗೆ ತಕ್ಕಂತೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ:
- ಅಮೆರಿಕಾದಲ್ಲಿ ಈ A I, ಆಧರಿತ ವ್ಯವಸ್ಥೆ, ಜನಾಂಗ ಆಧರಿತ ರಾಜಕೀಯ ಜಗಳಗಳನ್ನು ಬದಿಗೊತ್ತುತ್ತದೆ. ಇದು > ಮ್ಯಾನ್ಹ್ಯಾಟನ್ನ ಅತ್ಯಂತ ದುಬಾರಿ ಖಾಸಗಿಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಮತ್ತು ವೆಸ್ಟ್ ವರ್ಜೀನಿಯಾ ಅಥವಾ > ಮಿಸಿಸಿಪಿ ಡೆಲ್ಟಾದ ಗ್ರಾಮೀಣ ಭಾಗದ ಬಡಶಾಲೆಯಲ್ಲಿ ಓದಿದ ವಿದ್ಯಾರ್ಥಿಗೂ ಇರುವ ವ್ಯತ್ಯಾಸವನ್ನು > ಗುರುತಿಸುತ್ತದೆ.
- ಪಶ್ಚಿಮ ಯುರೋಪ್ನಲ್ಲಿ ಪ್ರಮುಖ ಸಮಸ್ಯೆ ವರ್ಗಭೇದ ಮತ್ತು ವಲಸೆಗಾರರ ಪರಿಸ್ಥಿತಿ. ಈ A I, ಆಧರಿತ ವ್ಯವಸ್ಥೆ > ಅಲ್ಲಿನ ಪ್ರಾದೇಶಿಕ ಮತ್ತು ಶೈಕ್ಷಣಿಕ ಡೇಟಾಬೇಸ್ಗಳನ್ನು ಬಳಸಿಕೊಳ್ಳುತ್ತದೆ. ಇದು ಪ್ಯಾರಿಸ್, ಲಂಡನ್ > ಅಥವಾ ಮ್ಯಾಡ್ರಿಡ್ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗೂ ಮತ್ತು ಹಿಂದುಳಿದ ಕೈಗಾರಿಕಾ ಪ್ರದೇಶ > ಅಥವಾ ವಲಸೆಗಾರರ ಕೊಲೊನಿಗಳಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗೂ ಇರುವ ಅಂತರವನ್ನು ಸ್ವಯಂಚಾಲಿತವಾಗಿ > ಸರಿದೂಗಿಸುತ್ತದೆ.
- ಪಶ್ಚಿಮ ಯುರೋಪ್ನಲ್ಲಿ ಪ್ರಮುಖ ಸಮಸ್ಯೆ ವರ್ಗಭೇದ ಮತ್ತು ವಲಸೆಗಾರರ ಪರಿಸ್ಥಿತಿ. ಈ A I, ಆಧರಿತ ವ್ಯವಸ್ಥೆ > ಅಲ್ಲಿನ ಪ್ರಾದೇಶಿಕ ಮತ್ತು ಶೈಕ್ಷಣಿಕ ಡೇಟಾಬೇಸ್ಗಳನ್ನು ಬಳಸಿಕೊಳ್ಳುತ್ತದೆ. ಇದು ಪ್ಯಾರಿಸ್, ಲಂಡನ್ > ಅಥವಾ ಮ್ಯಾಡ್ರಿಡ್ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗೂ ಮತ್ತು ಹಿಂದುಳಿದ ಕೈಗಾರಿಕಾ ಪ್ರದೇಶ > ಅಥವಾ ವಲಸೆಗಾರರ ಕೊಲೊನಿಗಳಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗೂ ಇರುವ ಅಂತರವನ್ನು ಸ್ವಯಂಚಾಲಿತವಾಗಿ > ಸರಿದೂಗಿಸುತ್ತದೆ.
ಆದರೆ ಇಲ್ಲಿದೆ ನೋಡಿ, ಅತ್ಯಂತ ಪ್ರಮುಖವಾದ ಭಾಗ, —ಆಶ್ಚರ್ಯದ ಆ ಒಂದು ಕ್ಷಣ. ನೀವು ಮೀಸಲಾತಿಯನ್ನು ವಿರೋಧಿಸುವವರಾಗಿರಲಿ ಅಥವಾ ಬೆಂಬಲಿಸುವವರಾಗಿರಲಿ, ಪ್ರತಿಯೊಬ್ಬರನ್ನೂ ಒಪ್ಪಿಸುವಂತಹ ಸತ್ಯ ಇದು.
ಮಾನವ ಚಾಲಿತ ಅಥವಾ ರಾಜಕೀಯ ಕೋಟಾ ಪದ್ಧತಿಯು ಎಂದೆಂದೂ ಹರಿಯುತ್ತಲೇ ಇರುವ ನೀರಿನ ನಲ್ಲಿ ಇದ್ದಂತೆ; ಅದನ್ನು ಒಮ್ಮೆ ಆನ್ ಮಾಡಿದರೆ, ರಾಜಕೀಯ ಕಾರಣಗಳಿಂದ ಅದು ಎಂದಿಗೂ ಆಫ್ ಆಗುವುದಿಲ್ಲ. ಆದರೆ ಈ AI-ಚಾಲಿತ ವ್ಯವಸ್ಥೆ ಸ್ವಭಾವತಃ ಒಂದು "ಸ್ವಯಂ-ಕರಗುವ" (Self-Dissolving) ವ್ಯವಸ್ಥೆಯಾಗಿದೆ.
ಈ ಅಲ್ಗಾರಿದಮ್ ಯಶಸ್ವಿಯಾಗಿ ಅರ್ಹರನ್ನು ಗುರುತಿಸಿ, ಅವರಿಗೆ ಆದ್ಯತೆಯ ಅಂಕಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಂತೆ, ಸಿಸ್ಟಮ್ಗೆ ಹೊಸದಾಗಿ ಬರುವ ದತ್ತಾಂಶಗಳು ಬದಲಾಗುತ್ತವೆ. ಒಂದು ನಿರ್ದಿಷ್ಟ ಪ್ರದೇಶದ ಅಥವಾ ಸಮುದಾಯದ ಮಕ್ಕಳು ಇತರರಂತೆಯೇ ಅದೇ ಪ್ರಮಾಣದಲ್ಲಿ ಪದವಿ ಪಡೆಯುತ್ತಿದ್ದಾರೆ, ಸಂಪಾದಿಸುತ್ತಿದ್ದಾರೆ ಮತ್ತು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ದತ್ತಾಂಶಗಳು ತೋರಿಸಿದಾಗ, ಅವರಿಗೆ "ಆದ್ಯತೆಯ ಅಂಕಗಳನ್ನು" ನೀಡುವುದನ್ನು A I, ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.
ಈ ಬದಲಾವಣೆಗೆ ಸಂಸತ್ತಿನಲ್ಲಿ ಯಾವುದೇ ಹೊಸ ಕಾಯ್ದೆಯ ಅಗತ್ಯವಿರುವುದಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪು ಬೇಕಾಗಿಲ್ಲ. ಯಾವುದೇ ಸಾಮಾಜಿಕ ಪ್ರತಿಭಟನೆ ಅಥವಾ ಮುಷ್ಕರದ ಅಗತ್ಯವಿರುವುದಿಲ್ಲ! ಈ ವ್ಯವಸ್ಥೆಯು ತನ್ನದೇ ಯಶಸ್ಸಿನ ಮೂಲಕ ತನ್ನ ಅಸ್ತಿತ್ವವನ್ನು ತಾನೇ ಶಾಂತಿಯುತವಾಗಿ ಮುಗಿಸಿಕೊಳ್ಳುತ್ತದೆ.
ಕೊನೆಗೆ, ಪ್ರತಿಯೊಬ್ಬರ ಸಾಮಾಜಿಕ ಸ್ಥಿತಿಯ ಅಂಕಗಳು ಒಂದೇ ಸಮಾನ ಮಟ್ಟಕ್ಕೆ ಬಂದು ತಲುಪುತ್ತವೆ. ನಿಮ್ಮ ಜನ್ಮವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ನಿಂತಾಗ, ಈ ಆದ್ಯತೆಯ ಅಂಕಗಳು ಶೂನ್ಯಕ್ಕೆ ತಲುಪುತ್ತವೆ. ಕೋಟಾಗಳನ್ನು ರಾಜಕಾರಣಿಗಳು ರದ್ದುಗೊಳಿಸುವ ಅಗತ್ಯವಿರುವುದಿಲ್ಲ—ಅವು ಗಣಿತದ ದೃಷ್ಟಿಯಿಂದ ತಾವಾಗಿಯೇ ಅರ್ಥಹೀನವಾಗುತ್ತವೆ (mathematically irrelevant).
ಉಪಸಂಹಾರ.
ನಮ್ಮ ಬಳಿ ದತ್ತಾಂಶವಿದೆ, A I, ಅಂತಹ ಸಮರ್ಥ ತಂತ್ರಜ್ಞಾನವೂ ಇದೆ. ನಾವು ಒಂದು 'A I, ಆಧರಿತ ಓಪನ್-ಸೋರ್ಸ್ ಅಲ್ಗಾರಿದಮ್'ಗಾಗಿ ನಿರ್ಧರಿಸಿದರೆ—ಅಲ್ಲಿ ರಹಸ್ಯತೆಯ ಭಯವಿಲ್ಲ. ಅದರ ಕೋಡ್ ಆನ್ಲೈನ್ನಲ್ಲಿ ಪ್ರತಿಯೊಬ್ಬರಿಗೂ ಕಾಣುವಂತೆ ಇರುತ್ತದೆ—ಆಗ ರಾಜಕಾರಣಿಗಳು ಮಾಡಲು ನಿರಾಕರಿಸುವ ನ್ಯಾಯದ ಕೆಲಸವನ್ನು ಈ ಪಾರದರ್ಶಕ ಗಣಿತವೇ ಮಾಡುತ್ತದೆ.
ನಾವು ನಮ್ಮ ಪೂರ್ವಜರು ಯಾರಾಗಿದ್ದರು ಎಂಬುದರ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಸಮಾಜವಾಗುವುದನ್ನು ನಿಲ್ಲಿಸಬೇಕು ಮತ್ತು ನಮ್ಮ ಮಕ್ಕಳು ಏನಾಗಬಹುದು ಎಂಬುದನ್ನು ನೋಡುವ ಸಮಾಜವಾಗಿ ಬದಲಾಗಬೇಕು. ನಾವು ಕಿತ್ತಾಡುವುದನ್ನು ನಿಲ್ಲಿಸೋಣ. ಮತ್ತು ಅತ್ಯುತ್ತಮ ಪ್ರತಿಭೆಯು—ಅದು ಈ ಭೂಮಿಯ ಮೇಲೆ ಎಲ್ಲಿಯೇ ಜನ್ಮತಾಳಿದ್ದರೂ—ಅದು ಬೆಳಗಲು ಬೇಕಾದ ಬೆಂಬಲವನ್ನು ನೀಡಲು ಈ A I, ಆಧರಿತ ನ್ಯಾಯಯುತ ವ್ಯವಸ್ಥೆಯನ್ನು ಬಳಸೋಣ.
ಮುಕ್ತಾಯದ ನುಡಿಗಳು
ನಾನು ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ , ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ ಸಂಪೂರ್ಣವಾಗಿ ದೋಷಮುಕ್ತವಾಗಿದೆ ಎಂದು ನಾನೇನೂ ವಾದಿಸುತ್ತಿಲ್ಲ. ನನಗೂ ಗೊತ್ತು, ಇದರಲ್ಲಿ ಹಲವು ಸವಾಲುಗಳಿವೆ.
ಜನರೇನಾದರೂ ತಮ್ಮ ಡೇಟಾವನ್ನು ವ್ಯವಸ್ಥಿತವಾಗಿ ಮರೆಮಾಚಿ, ಅಲ್ಗಾರಿದಮ್ ಅನ್ನು ವಂಚಿಸಲು ಯೋಚಿಸಿದರೆ ಏನು ಮಾಡುವುದು? ಅಥವಾ ಈ ವ್ಯವಸ್ಥೆಗೆ ಕೋಡ್ ಬರೆಯುವ ಮನುಷ್ಯನೇ ತನ್ನ ಪೂರ್ವಾಗ್ರಹಗಳನ್ನು ಅದರಲ್ಲಿ ತೂರಿಸಿದರೆ ಹೇಗೆ? ಇವೆಲ್ಲವೂ ಖಂಡಿತಾ ಯೋಚಿಸಬೇಕಾದ ಗಂಭೀರ ವಿಷಯಗಳೇ.
ಆದರೆ ನನ್ನ ವಾದ ಇಷ್ಟೇ, ಪ್ರಸ್ತುತ ನಮ್ಮ ಕಣ್ಣಮುಂದಿರುವ ವ್ಯವಸ್ಥೆ ಸಂಪೂರ್ಣವಾಗಿ ಹೆಪ್ಪುಗಟ್ಟಿ ದೆ, ರಾಜಕೀಯದ ಕೆಸರಲ್ಲಿ ಸಿಲುಕಿಕೊಂಡಿದೆ. ನಾವು ಅದನ್ನೇ ಹಿಡಿದು ಸದಾ ಕಿತ್ತಾಡುತ್ತಾ ಕೂರುವ ಬದಲು, ಒಂದು ಹೊಸ ದಾರಿಯ ಬಗ್ಗೆ ಯೋಚಿಸಬೇಕಿದೆ.
ಈ 'A I, ಆಧರಿತ ನ್ಯಾಯಯುತ ವ್ಯವಸ್ಥೆ' ಒಂದು ಪರಿಪೂರ್ಣವಾದ ಅಂತಿಮ ಪರಿಹಾರವಲ್ಲದಿರಬಹುದು, ಆದರೆ ಬದಲಾವಣೆಯ ಕಡೆಗೆ ನಾವಿಡಬಹುದಾದ ಅತ್ಯುತ್ತಮವಾದ ಮೊದಲ ಹೆಜ್ಜೆಯಂತೂ ಖಂಡಿತ ಹೌದು.
ಬನ್ನಿ, ಹಳೆಯ ಗೋಡೆಗಳನ್ನೇ ಮುಂದೊಡ್ಡಿ ಜಗಳವಾಡುವುದನ್ನು ನಿಲ್ಲಿಸಿ, ಭವಿಷ್ಯದ ಮಕ್ಕಳಿಗಾಗಿ ಒಂದು ಹೊಸ ನ್ಯಾಯದ ತಳಹದಿಯನ್ನು ನಿರ್ಮಿಸುವ ಬಗ್ಗೆ ಚರ್ಚೆ ಆರಂಭಿಸೋಣ.
--------------------------------------------------------------------
ಇದು ನಿಮಗೆ ಇಷ್ಟವಾಗಿದ್ದರೆ, ನನ್ನ ಸಾಪ್ತಾಹಿಕ ಓದುಗರೊಂದಿಗೆ ಸೇರಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ. ಪ್ರತಿ ಶನಿವಾರ, ಮೇಲ್ಮೈಯನ್ನು ಮೀರಿದ ಮತ್ತು ನಿಜವಾಗಿಯೂ ಮುಖ್ಯವಾದ ಪ್ರಶ್ನೆಗಳನ್ನು ಪರಿಹರಿಸುವ ಆಳವಾದ ವಿಶ್ಲೇಷಣೆಯನ್ನು ನಾನು ಪ್ರಕಟಿಸುತ್ತೇನೆ. ಪೇವಾಲ್‌ಗಳಿಲ್ಲ, ಕ್ಲಿಕ್‌ಬೈಟ್ ಇಲ್ಲ - ಕೇವಲ ನೇರ ವಿನಿಮಯ: ನನ್ನ ಮನಸ್ಸಿನಿಂದ ನಿಮ್ಮದಕ್ಕೆ. ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ.
© Dr. King, Swami Satyapriya 2026

No comments:
Post a Comment